ಸೆಲ್ಫಿ ತೆಗೆಯಲು ಹೋಗಿ ಯುವತಿಯೊಬ್ಬಳು 60 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಮಹಾರಾಷ್ಟ್ರದ (Maharashtra) ಬೋರನೆ ಘಾಟ್‌ನಲ್ಲಿ ಶನಿವಾರ(ಆ.3ರಂದು) ನಡೆದಿದೆ.



ಶನಿವಾರ ಪುಣೆಯ ತಂಡವೊಂದು ತೋಸ್ಘರ್ ಜಲಪಾತಕ್ಕೆ ಭೇಟಿ ನೀಡಿತ್ತು.


ಪುಣೆಯ ವಾರ್ಜೆಯ ನಿವಾಸಿ 29 ವರ್ಷದ ನಸ್ರೀನ್ ಅಮೀರ್ ಎನ್ನುವಾಕೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾಳೆ. ಈ ವೇಳೆ ಆಕೆ 60 ಅಡಿ ಆಳದ ಕಂದಕಕ್ಕೆ ಜಾರಿ ಬಿದ್ದಿದ್ದಾಳೆ.
ಕೂಡಲೇ ಸ್ಥಳೀಯರು ಹಾಗೂ ಹೋಮ್ ಗಾರ್ಡ್ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದಿದ್ದು, ಕಂದಕಕ್ಕೆ ಬಿದ್ದ ಯುವತಿಯನ್ನು ಹರಸಾಹಸಪಟ್ಟು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಆಕೆಯ ಸ್ಥಿತಿ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.