ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್‌ನಲ್ಲಿ ಸಂಭವಿಸಿರುವ ಭೂಕುಸಿತಕ್ಕೆ ಸಂಬಂಧಿಸಿ ರೈಲು ಮಾರ್ಗದ ದುರಸ್ತಿ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ.



ಕುಸಿತ ಆದ ಸ್ಥಳದಿಂದ ಕೆಳಭಾಗದಿಂದ ಬಂಡೆಕಲ್ಲು, ಮರಳಿನ ಚೀಲಗಳನ್ನು ಜೋಡಿಸಿ ಗೋಡೆ ನಿರ್ಮಾಣ ಕಾರ್ಯ ನಡೆಸಲಾಗಿದ್ದು, ಅದಕ್ಕೆ ಕಬ್ಬಿಣ ನೆಟ್ ಅಳವಡಿಸಿ ಹಿಡಿದಿಟ್ಟು ಗಟ್ಟಿಗೊಳಿಸುವ ಕಾರ್ಯ ಬಹುತೇಕ ಕೆಳಭಾಗದಿಂದ ಮೇಲಿನ ವರೆಗೆ ಪೂರ್ಣಗೊಂಡಿದೆ.


ಈಗ ಭೂಕುಸಿತ ಸ್ಥಳದಲ್ಲಿ ರೈಲು ಮಾರ್ಗಕ್ಕೆ ಹೊಂದಿಕೊಂಡಂತೆ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಸಂಬಂಧಿಸಿದ ಕೆಲಸಗಳನ್ನು ಆರಂಭಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ರೈಲು ಮಾರ್ಗದ ಸುರಕ್ಷೆ ಹಾಗೂ ದುರಸ್ತಿ ಕಾರ್ಯದ ಪರಿಶೀಲನೆ ನಡೆಸಿ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. ಸದ್ಯ ಆ.6ರ ವರೆಗೆ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ. ಇನ್ನೂ ಕೆಲವು ದಿನಗಳ ಅಂತಿಮ ಹಂತದ ದುರಸ್ತಿ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.