Home ಕರಾವಳಿ ಮಂಗಳೂರು: ವಿಧ್ಯಾರ್ಥಿನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು – ಅಂಬ್ಯುಲೆನ್ಸ್ ಆದ ಖಾಸಗಿ ಬಸ್

ಮಂಗಳೂರು: ವಿಧ್ಯಾರ್ಥಿನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು – ಅಂಬ್ಯುಲೆನ್ಸ್ ಆದ ಖಾಸಗಿ ಬಸ್

0

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ಚಾಲಕ ಹಾಗು ನಿರ್ವಾಹಕ ಏನನ್ನೂ ಯೋಚಿಸದೆ ಬಸ್ಸನ್ನು ಆಂಬುಲೆನ್ಸ್ ಮಾದರಿಯಲ್ಲಿ ಚಲಾಯಿಸಿ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.


13ಎಫ್ ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದೆ. ಆಕೆಗೆ ಹೃದಯಾಘಾತವಾಗುವ ಲಕ್ಷಣಗಳು ಕಂಡುಬರುತ್ತಿದ್ದಂತೆ ಎಚ್ಚೆತ್ತುಕೊಂಡ ಬಸ್ಸಿನ ಚಾಲಕ ಗಜೇಂದ್ರ ಕುಂದರ್ ಹಾಗೂ ನಿರ್ವಾಹಕ ಮಹೇಶ್ ಪೂಜಾರಿ ಸುರೇಶ್ ಏನ್ನನ್ನು ಯೋಚಿಸದೆ ಎಲ್ಲಾ ಪ್ರಯಾಣಿಕರನ್ನು ಹೊತ್ತುಕೊಂಡು ಬಸ್ಸನ್ನು ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6 ಕಿ.ಮೀ ದೂರವನ್ನು 6 ನಿಮಿಷಗಳಲ್ಲಿ ಕ್ರಮಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಹಾಗೂ ನಿರ್ವಾಹಕ ಯಾರ ಅನುಮತಿಯನ್ನು ಪಡೆಯದೇ ಆಸ್ಪತ್ರೆಯ ಆವರಣಕ್ಕೆ ಬಸ್ಸನ್ನು ಚಲಾಯಿಸಿದ್ದಾರೆ. ಸೂಕ್ತ ಸಮಯದಲ್ಲಿ ವಿದ್ಯಾರ್ಥಿಯನ್ನು ಕ್ಯಾಶುವಾಲಿಟಿ ವಾರ್ಡ್ ಗೆ ಸೇರಿಸಿದರು. ಇದರಿಂದಾಗಿ ವಿದ್ಯಾರ್ಥಿಯ ಜೀವ ಉಳಿಯಿತು. ಚಾಲಕನ ಹಾಗೂ ನಿರ್ವಾಹಕನ ಸಮಯಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕರಾವಳಿಯ ಬಸ್ಸು ಚಾಲಕ, ನಿರ್ವಹಕ, ಶ್ರಮಿಕ ವರ್ಗ ಮಾನವೀಯತೆಯ ಸಾಕಾರರು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

LEAVE A REPLY

Please enter your comment!
Please enter your name here