Home ಕರಾವಳಿ ನಾಲ್ಕು ವರ್ಷಗಳ ಬಳಿಕ ನೇತ್ರಾವತಿ-ಕುಮಾರಧಾರ ಸಂಗಮ – ಬಾಗಿನ ಅರ್ಪಣೆ

ನಾಲ್ಕು ವರ್ಷಗಳ ಬಳಿಕ ನೇತ್ರಾವತಿ-ಕುಮಾರಧಾರ ಸಂಗಮ – ಬಾಗಿನ ಅರ್ಪಣೆ

0

ಉಪ್ಪಿನಂಗಡಿ: ನಾಲ್ಕು ವರ್ಷಗಳ ಬಳಿಕ ಕರಾವಳಿಯ ಜೀವನದಿ ನೇತ್ರಾವತಿ ಹಾಗೂ ಕುಮಾರಧಾರ ನದಿಯು ಮಂಗಳವಾರ ರಾತ್ರಿಯಾಗುತ್ತಿದ್ದಂತೆ ಸಂಗಮವಾಗಿದೆ. ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪವಿತ್ರ ನದಿಗಳು ಸಂಗಮವಾಯಿತು. ನದಿಗಳೆರಡರ ಸಂಗಮವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತ ಸಂದೋಹ ಕಾದು ಕುಳಿತಿತ್ತು. ರಾತ್ರಿಯಾಗುತ್ತಿದ್ದಂತೆ ಎರಡೂ ನದಿಗಳು ಅಪಾಯದ ಮಟ್ಟ ಮೀರಿ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರವೇಶಿಸಿತು. ಎರಡೂ ನದಿಗಳು ಸಂಗಮವಾಗುತ್ತಿದ್ದಂತೆ ಜನರಲ್ಲಿ ಭಕ್ತಿಯ ಹರ್ಷೋದ್ಘಾರ ಮುಗಿಲು ಮುಟ್ಟಿತು. ನಾಲ್ಕು ವರ್ಷದ ಬಳಿಕ ನೇತ್ರಾವತಿ-ಕುಮಾರಾಧಾರ ನದಿಗಳು ಸಂಗಮವಾಗುತ್ತಿದ್ದಂತೆ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಧ್ವಜಸ್ತಂಭದ ಬಳಿ ವಿಶೇಷ ಪೂಜೆ ನಡೆಯಿತು.


ಈ ವೇಳೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಬಾಗಿನ ಅರ್ಪಿಸಿದರು. ಈ ವೇಳೆ ಪೂಜೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಎಸಿ ಜುಬಿನ್ ಮೊಹಪತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಭಾಗಿಯಾದರು.

LEAVE A REPLY

Please enter your comment!
Please enter your name here