ವಿಟ್ಲ: ಜೋಡಿಯೊಂದು ಮಳೆಗಾಲದಲ್ಲಿ ಮೈ ಬಿಸಿ ಮಾಡಿಕೊಳ್ಳೋದಕ್ಕೆ ಹೋಗಿ ಇನ್ನೇನು ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುತ್ತೆ ಅನ್ನೋವಾಗಲೇ ಎಸ್ಕೇಪ್ ಆದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ತಮ್ಮ ಚಟವನ್ನು ತೀರಿಸಿಕೊಳ್ಳಲು ಪೊದೆ, ಪಾರ್ಕ್, ಬೀಚ್, ಕಾಡು, ನಿರ್ಜನ ಸ್ಥಳಗಳಲ್ಲಿ ಮೈಮರೆತು ಬಿಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯ ಅನೈತಿಕ ಚಟುವಟಿಕೆ, ಅಕ್ರಮ ದಂಧೆಗಳ ಅಡ್ಡೆಯಾಗಿದೆ.
ಇಲ್ಲೊಬ್ಬ ಬೈಕ್ ಸವಾರ ಬಾಲಕಿಯನ್ನು ರಕ್ಷಿತಾರಣ್ಯಕ್ಕೆ ಕರೆದುಕೊಂಡು ಬಂದಿದ್ದಾನೆ. ಮೊದಲೇ ಅನಿಸಿದನ್ನು ಮಾಡಬೇಕೆಂದುಕೊ0ಡಿದ್ದ ಜೋಡಿ ತಮಗೆ ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡೇ ಬಂದಿದೆ. ಕಾಂಡೋಮ್, ಎಣ್ಣೆ, ಪಿಲ್ಸ್ ಹೀಗೆ ಸುಖ ಅನುಭವಿಸಲು ಯಾವುದೆಲ್ಲಾ ಬೇಕೋ ಅದನ್ನೆಲ್ಲಾ ಹಿಡಿದುಕೊಂಡು ಬಂದು ಏಕಾಂತದಲ್ಲಿ ಮೈಮರೆಯೋದಕ್ಕೆ ಸಿದ್ಧರಾಗಿದ್ದಾರೆ.
ಇನ್ನೇನು ಎಲ್ಲವೂ ಶುರುವಾಗುವಸ್ಟರಲ್ಲೇ ಕಾಡಿನೊಳಗೆ ಜೋಡಿ ಹೋಗಿದೆ ಎಂಬ ಸುದ್ದಿ ಸ್ಥಳೀಯರಲ್ಲಿ ಹರಡಿತ್ತು. ಸ್ಥಳೀಯರೆಲ್ಲಾ ಸೇರಿಕೊಂಡು ಹುಡುಕಾಟ ನಡೆಸಿದ್ದಾರೆ. ಜನ ಜಾಲಾಡುತ್ತಿದ್ದ ನಡುವೆಯೇ ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ಯುವತಿ ಪರಾರಿಯಾಗಿದ್ದಾರೆ.
ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕಾಗಮಿಸಿದ್ದು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮ್ ಪ್ಯಾಕ್, ಚಪ್ಪಲಿ, ಬಾಟಲಿ, ನೆಲಕ್ಕೆ ಹಾಸಿದ ಬಟ್ಟೆ ಇತ್ಯಾದಿ ವಸ್ತುಗಳು ಪತ್ತೆಯಾಗಿದೆ. ಇದೀಗ ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಕೊಳ್ನಾಡು ಗ್ರಾಮದ ಸಾಲೆತ್ತೂರು- ಕುಡ್ತಮುಗೇರು ಮೂಲಕ ಕನ್ಯಾನ ತಲುಪುವ ಕಾಂಕ್ರೀಟ್ ರಸ್ತೆ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತಿದೆ. ದಿನವಿಡೀ ರಕ್ಷಿತಾರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯ, ಡ್ರಗ್ಸ್ ಸೇವಿಸುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಾ ಜನ ಸಾಮಾನ್ಯರ ಪಾಲಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ.
ನಶೆಯಲ್ಲಿ ತೇಲಾಡುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪರಿಸರದ ಜನರ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ಇನ್ನಾದರೂ ರಕ್ಷಿತಾರಣ್ಯ ಪರಿಸರ ಪುಂಡರಿಂದ ಮುಕ್ತವಾಗಲಿ ಎಂದು ಜನ ಒತ್ತಾಯಿಸಿದ್ದಾರೆ.