ಪುತ್ತೂರು : ಇಲ್ಲಿನ ಅರಿಯಡ್ಕ ಗ್ರಾಮದಲ್ಲಿ ಹಲಸಿನ ಹಣ್ಣಿನ ವಿಚಾರದಲ್ಲಿ ಜಗಳ ಉಂಟಾಗಿ, ವ್ಯಕ್ತಿಯೊಬ್ಬರಿಗೆ ಕತ್ತಿ ತೋರಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಅರಿಯಡ್ಕ ಗ್ರಾಮದ ಅರುಣ್ ಕುಮಾರ್ (37) ಎಂಬುವರವರು ಹಲ್ಲೆಗೊಳಗಾದವರು. ಇವರು ಕೃಷಿ ಕೆಲಸ ಮಾಡುತ್ತಿದ್ದು, ಅವರಿಗೆ ಹಾಗೂ ಮನೆಯ ನೆರೆಯ ಸಂಬಂದಿಕರಾದ ನಾಗೇಶ್ ಮಣಿಯಾಣಿರವರ ಮಧ್ಯೆ ಜಾಗದ ವಿಚಾರದಲ್ಲಿ ಮನಸ್ತಾಪವಿರುತ್ತದೆ.
ಜು. 24ರಂದು ಅರುಣ್ ಅವರು ತಮಗೆ ಸೇರಿದ ಜಾಗದಲ್ಲಿ ಹಲಸಿನ ಹಣ್ಣನ್ನು ತೆಗೆಯುತ್ತಿರುವಾಗ ಆರೋಪಿಗಳಾದ ನಾಗೇಶ್ ಮತ್ತು ಆತನ ಹೆಂಡತಿ ಯಶೋಧರ ರವರು ಬಂದು ಅರುಣ್ ಹಾಗೂ ಅವರ ತಾಯಿ ಜಯಲಕ್ಷ್ಮಿರವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿರುತ್ತಾರೆ.
ಈ ಬಗ್ಗೆ ಪ್ರಶ್ನಿಸಿದಾಗ ಅರುಣ್ ಅವರಿಗೆ ಆರೋಪಿಗಳು ಹಲ್ಲೆ ನಡೆಸಿರುತ್ತಾರೆ. ಆ ಸಂದರ್ಭದಲ್ಲಿ ಅರುಣ್ ತಾಯಿ ಗಲಾಟೆಯನ್ನು ಬಿಡಿಸಿದ್ದು, ಆರೋಪಿ ನಾಗೇಶ್ ಮಣಿಯಾಣಿಯು ಅರುಣ್ ರವರನ್ನು ಕತ್ತಿಯಿಂದ ಕಡೆಯುವುದಾಗಿ ಬೆದರಿಕೆ ಒಡ್ಡಿರುತ್ತಾನೆ.
ಹಲ್ಲೆಯಿಂದ ಉಂಟಾದ ಗಾಯದ ಚಿಕಿತ್ಸೆಗಾಗಿ ಅರುಣ್‌ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅರುಣ್ ರವರು ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 85/2024, ಕಲಂ:-352,118(1),115(2),351(2) ಜೊತೆಗೆ 3(5) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.