ಪುತ್ತೂರು: ಸರ್ವೆ ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸರ್ವೆಯ ಗೌರಿ ಹೊಳೆಯ ಸೇತುವೆ ಬಳಿ ಪತ್ತೆಯಾಗಿದೆ.
ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್ (21) ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ.
ಜುಲೈ 19ರ ರಾತ್ರಿಯಿಂದ ಸನ್ಮಿತ್ ನಾಪತ್ತೆಯಾಗಿದ್ದನು. ಸನ್ಮಿತ್ ಅವರ ಸ್ಕೂಟರ್, ಹೊಳೆ ಬದಿಯ 150 ಮೀ. ದೂರದಲ್ಲಿ ಪತ್ತೆಯಾಗಿತ್ತು. ಸ್ಕೂಟರ್ ನಲ್ಲಿ ಮೊಬೈಲ್, ಪರ್ಸ್, ಹೆಲ್ಮೆಟ್, ಟಿಫಿನ್ ಬಾಕ್ಸ್, ಕಂಡು ಬಂದಿತ್ತು. ಬಳಿಕ ಸನ್ಮಿತ್ ತಂದೆ ಚಂದ್ರಗೌಡ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಚಂದ್ರಗೌಡ ಅವರ ದೂರಿನ ಮೇರೆಗೆ ಜು.20ರ ಶನಿವಾರ ಬೆಳಿಗ್ಗಿನಿಂದಲೇ ಸಂಪ್ಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹಕ್ಕಾಗಿ ಗೌರಿ ಹೊಳೆಯಲ್ಲಿ ಶೋಧ ಕಾರ್ಯ ಪ್ರಾರಂಭಿಸಿದ್ದರು. ಆದರೆ ಇದೀಗ ಯುವಕ ಸನ್ಮಿತ್ ಅವರ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.