ಕಡಬ : ಶನಿವಾರ ರಾತ್ರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳಾರ ಸಮೀಪದ ತಿಮರಡ್ಡ ನಿವಾಸಿ ಆಝರ್ ( 28) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಎಂದಿನಂತೆ ಕೆಲಸಕ್ಕೆ ಹೋಗಿ ಮನೆಗೆ ಬಂದಿದ್ದ ಆಝರ್ ಕೋಣೆಯಲ್ಲಿ ಸೀರೆ ಬಳಸಿ ನೇಣಿಗೆ ಶರಣಾಗಿದ್ದಾನೆ. ಟಿಂಬರ್ ವೃತ್ತಿ ಮಾಡುತ್ತಿದ್ದ ಈತ ಎಂದಿನಂತೆ ಶನಿವಾರವೂ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಬಂದಿದ್ದರು. ಕೆಲಸದಿಂದ ಬರುವಾಗ ತನ್ನ ಮಗುವಿಗೂ ತಿನಿಸು ತಂದಿದ್ದರು ಎನ್ನಲಾಗಿದೆ.
ಬಳಿಕ ಕೋಣೆಯೊಳಗೆ ತೆರಳಿ ಸೀರೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣ ತೀಳಿದು ಬಂದಿಲ್ಲ ಈ ಬಗ್ಗೆ ತನಿಖೆ ನಡೆಯುತ್ತಿದೆ.