ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್ ಅವರಿಗೆ ಸಂಬಂಧಪಟ್ಟ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಅಕ್ರಮ ಆಸ್ತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮೂರು ವಾಸದ ಮನೆ ,ಚಿನ್ನಾಭರಣ ಹಾಗೂ ಜಮೀನು ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಮೈಸೂರು ಬೆಂಗಳೂರು ಸೇರಿದಂತೆ ಒಟ್ಟು ಮೂರು ಮನೆಗಳಿವೆ ಇದಲ್ಲದೆ 4 ಎಕರೆ 27 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ ಇದರ ಆಸ್ತಿ ಮೌಲ್ಯ 2.12 ಕೋಟಿ ಆಗಿರುತ್ತದೆ.19.40 ಲಕ್ಷದ ಚಿನ್ನಾಭರಣಗಳು, 20.50 ಲಕ್ಷ ಮೌಲ್ಯದ ವಾಹನಗಳು , ಜಮೀನು ಖರೀದಿಸಲು 10 ಲಕ್ಷ ಹಣ ಮುಂಗಡ ನೀಡಿರುವುದು, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 16 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಇರುವುದು ಪತ್ತೆಯಾಗಿದೆ.
ಆನಂದ್ ಸಿ.ಎಲ್. ಅವರ ಒಟ್ಟು ಆಸ್ತಿ 2.77 ಕೋಟಿ ಆಗಿರುತ್ತದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.