Home ಉಡುಪಿ ಉಡುಪಿ: ಬಾರ್ ಮಾಲೀಕನ ಮನೆಯಲ್ಲಿ ಅಗ್ನಿ ಅವಘಡ ಪ್ರಕರಣ – ಉದ್ಯಮಿಯ ಪತ್ನಿಯೂ ಚಿಕಿತ್ಸೆಗೆ ಸ್ಪಂದಿಸದೆ...

ಉಡುಪಿ: ಬಾರ್ ಮಾಲೀಕನ ಮನೆಯಲ್ಲಿ ಅಗ್ನಿ ಅವಘಡ ಪ್ರಕರಣ – ಉದ್ಯಮಿಯ ಪತ್ನಿಯೂ ಚಿಕಿತ್ಸೆಗೆ ಸ್ಪಂದಿಸದೆ ಸಾವು

0

ಉಡುಪಿ: ಉಡುಪಿ ನಗರದ ಮನೆಯೊಂದರಲ್ಲಿ ನಡೆದಿದ್ದ ಭಾರೀ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ್ ಶೆಟ್ಟಿ ಅವರ ಪತ್ನಿ ಅಶ್ವಿನಿ (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ ನಡೆದಿದ್ದ ಅಗ್ನಿ ಅವಘಡದಲ್ಲಿ ಅಶ್ವಿನಿ ಅವರ ಪತಿ ರಮಾನಂದ್ ಶೆಟ್ಟಿ ಮೃತಪಟ್ಟಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಕೂಡ ಮೃತಪಟ್ಟಿದ್ದು ಕುಟುಂಬದಲ್ಲಿ ಶೋಕ ಮುಗಿಲು ಮುಟ್ಟಿದೆ. ಉಡುಪಿ ನಗರದಲ್ಲಿ ವಾಸ ಮಾಡುತ್ತಿದ್ದ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಮನೆಯಲ್ಲಿ ನಿನ್ನೆ ಮುಂಜಾನೆ ಶಾರ್ಟ್ ಸರ್ಕ್ಯುಟ್ ನಿಂದ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ ಮನೆಯ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮನೆಯಲ್ಲಿದ್ದ ರಮಾನಂದ್ ಶೆಟ್ಟಿ – ಅಶ್ವಿನಿ ದಂಪತಿಯ ಮಕ್ಕಳಿಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಅಗ್ನಿ ಅವಘಡದಿಂದ ಮನೆಯೊಳಗೆ ದಟ್ಟ ಹೊಗೆ ಆವರಿಸಿ ದಂಪತಿ ಅಸ್ವಸ್ಥಗೊಂಡಿದ್ದರು.ರಮಾನಂದ್ ಶೆಟ್ಟಿ ಆಸ್ಪತ್ರೆಯಲ್ಲಿ ನಿನ್ನೆಯೇ ಮೃತಪಟ್ಟಿದ್ದರೆ, ಪತ್ನಿ ಅಶ್ವಿನಿ ಕೆಎಂಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಬೆಂಕಿಯ ಕೆನ್ನಾಲೆಗೆಗೆ ಅವರಿಗೆ ಉಸಿರಾಡಲು ಸಾಧ್ಯವಾಗದೆ ಮೆದುಳು ಹಾಗೂ ಶ್ವಾಸಕೋಶ ಬ್ಲಾಕ್ ಆಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಅಶ್ವಿನಿ ಮೃತಪಟ್ಟಿದ್ದಾರೆ. ಸದ್ಯ ಇಬ್ಬರು ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳುದುಬಂದಿದೆ.

LEAVE A REPLY

Please enter your comment!
Please enter your name here