ಸುಳ್ಯ: ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಪಂಜಿಕಲ್ಲು ಎಸ್.ವಿ.ಎ.ಯು.ಪಿ ಶಾಲಾ ಪರಿಸರದಲ್ಲಿ ಒಂದು ದಿನ ಪ್ರಾಯದ ಹೆಣ್ಣು ಶಿಶುವೊಂದು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ.



ಆದೂರು ಪೊಲೀಸರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶಿಶುವನ್ನು ಶಾಲಾ ಪರಿಸರದಿಂದ ರಕ್ಷಿಸಿ, ಪೋಲಿಸ್ ಠಾಣೆಗೆ ತಂದು ಕಾಸರಗೋಡಿನ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಮಗು ಆರೋಗ್ಯವಾಗಿದೆ.

ಆದೂರು ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಮಗುವಿನ ಹೆತ್ತವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜನ್ಮ ನೀಡಿದ ಬಳಿಕ ಶಾಲಾ ಪರಿಸರದಲ್ಲಿ ಮಗುವನ್ನು ಉಪೇಕ್ಷಿಸಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.