ಮಂಗಳೂರು: ಐಸ್ ಕ್ರೀಮ್ ಪ್ರಿಯರಿಗೆ ಒಂದು ಸಿಹಿ ಸುದ್ದಿ ಮಂಗಳೂರಿನ ಕರಂಗಲ್ಪಾಡಿಯ ಹೋಟೆಲ್ ಎಜೆ ಗ್ರಾಂಡ್ ಇದರ ಮುಂಭಾಗದಲ್ಲಿರುವ ಲೋಟಸ್ ಪ್ಯಾರಡೈಸ್ ಇಲೈಟ್ ನ ಕೆಳ ಅಂತಸ್ತಿನಲ್ಲಿ “ಸ್ನೋ ಮ್ಯಾನ್” ಐಸ್ ಕ್ರೀಮ್ ಪಾರ್ಲರ್ ನಾಳೆ ಸಂಜೆ 04:30 ಕ್ಕೆ ಶುಭಾರಂಭಗೊಳ್ಳಲಿದೆ.
ಶುದ್ಧ ಸಸ್ಯಹಾರಿಯಾಗಿರುವ ಈ ಐಸ್ ಕ್ರೀಮ್ ನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ, ಕೃತಕ ಎಸ್ಸೆನ್ಸ್, ಬಣ್ಣಗಳು ಹಾಗೂ ಕೆಮಿಕಲ್ ಸಂರಕ್ಷಕಗಳನ್ನು ಬಳಸುವುದಿಲ್ಲ ಹಾಗೂ ಈ ಐಸ್ ಕ್ರೀಮ್ ಶುದ್ಧ ಹಾಲಿನಿಂದ ತಯಾರಾಗುತ್ತಿದ್ದು ಸಂಪೂರ್ಣ ಯಂತ್ರ ಚಾಲಿತ ಉಪಕರಣಗಳಿಂದ ಈ ಐಸ್ ಕ್ರೀಮ್ ಅನ್ನು ಸಿದ್ಧಪಡಿಸಲಾಗುತ್ತಿದೆ, ಮತ್ತೊಂದು ಮುಖ್ಯ ವಿಷಯವೇನೆಂದರೆ ಈ ಐಸ್ ಕ್ರೀಮ್ ನಲ್ಲಿ ಸಣ್ಣ ಮಕ್ಕಳಿಗೆ ಬೇಕಾಗುವ ಪ್ರೋಟೀನ್ ಅಂಶಗಳು ಕೂಡ ಒಳಗೊಂಡಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.