Home ತಾಜಾ ಸುದ್ದಿ ನಕಲಿ ಬಳಕೆದಾರರ ಪತ್ತೆಗಾಗಿ ಇನ್ನೂ ಎಲ್‌ಪಿಜಿಗೂ ಆಧಾರ್‌ ಜೋಡಣೆ

ನಕಲಿ ಬಳಕೆದಾರರ ಪತ್ತೆಗಾಗಿ ಇನ್ನೂ ಎಲ್‌ಪಿಜಿಗೂ ಆಧಾರ್‌ ಜೋಡಣೆ

0

ವದೆಹಲಿ: ಇತ್ತೀಚೆಗೆ ಎಲ್‌ಪಿಜಿ ಬಳಕೆದಾರರಲ್ಲೂ ನಕಲಿ ಬಳಕೆ ಮಾಡುವವರ ಬಗ್ಗೆ ಪತ್ತೆಯಾಗಿದೆ. ಹಾಗಾಗಿ ನಕಲಿ ಬಳಕೆದಾರರನ್ನು ಪತ್ತೆ ಹಚ್ಚಲು ಸರ್ಕಾರಿ ಸ್ವಾಮ್ಯದಲ್ಲಿರುವ ತೈಲ ಕಂಪನಿಗಳು ಎಲ್‌ಪಿಜಿಗೂ ಗ್ರಾಹಕರ ಆಧಾರ್‌ ಜೋಡಣೆಗೆ ಸರ್ಕಾರ ಮುಂದಾಗಿದೆ.

ತೈಲ ಸಚಿವ ಹರ್ದೀಪ್‌ ಸಿಂಗ್‌ ಪುರಿ ತನ್ನ ಟ್ವೀಟರ್‌ ಖಾತೆಯಲ್ಲಿ ‘ವಾಣಿಜ್ಯ ಸಿಲಿಂಡರ್‌ ಬಳಕೆದಾರರು ಪ್ರಮುಖವಾಗಿ ಅಡುಗೆ ಅನಿಲವನ್ನು ಬುಕ್‌ ಮಾಡುತ್ತಿದ್ದಾರೆ.

ಆದ್ದರಿಂದ ಕಾನೂನುಬದ್ಧವಾಗಿ ನೋಂದಾಯಿಸಿಕೊಂಡ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಎಲ್‌ಪಿಜಿ ಗ್ರಾಹಕರಿಗೆ ಆಧಾರ್ ಆಧಾರಿತ ಇ-ಕೆವೈಸಿ ದೃಢೀಕರಣ ನಡೆಸಲಾಗುತ್ತದೆ. ಇದರಿಂದ ನಕಲಿ ಬಳಕೆದಾರರನ್ನು ಪತ್ತೆ ಹಚ್ಚಿ ಅವರನ್ನು ತೆಗೆದು ಹಾಕಲು ಸಹಾಯವಾಗಲಿದೆ. ಈ ಆಧಾರ್‌ ಜೋಡಣೆ ಪ್ರಕ್ರಿಯೆ 8 ತಿಂಗಳಿಗಿಂದ ಹೆಚ್ಚು ಕಾಲ ಜಾರಿಯಲ್ಲಿರಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಹಾಲಿ ಗೃಹ ಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ ಬೆಲೆ 803 ರು. ಇದ್ದರೆ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್‌ ಬೆಲೆ 1646 ರು.ನಷ್ಟು ಇದೆ.

LEAVE A REPLY

Please enter your comment!
Please enter your name here