ಮಂಗಳೂರು: ಇಂದು ಬೆಳಗಿನ ಜಾವ ಉರ್ವ ಠಾಣ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ವಯೋವೃದ್ಧ ದಂಪತಿಗಳ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿ ಪರಾರಿಯಾಗಿದ್ದ “ಚಡ್ಡಿ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ರಾಜಸ್ಥಾನ ಹಾಗೂ ಮಧ್ಯ ಪ್ರದೇಶದ ನಿವಾಸಿಗಳನ್ನು ಉರ್ವ ಠಾಣಾ ಪೋಲಿಸ್ ನಿರೀಕ್ಷಕರು ಹಾಗೂ ಹಾಸನ ಜಿಲ್ಲೆಯ ಪೋಲಿಸ್ ಅಧಿಕ್ಷಕರು ಹಾಗೂ ತಂಡದ ಸಹಾಯದಿಂದ ಹಾಸನದ ಸಕಲೇಶಪುರದಲ್ಲಿ ಬಂಧಿಸಲಾಯಿತು.
ಘಟನೆ ನಡೆದ ಕೆಲವೇ ಗಂಟೆಗಳ ಒಳಗೆ ಕುಖ್ಯಾತ ದರೋಡೆಕೋರರನ್ನು ಹೆಡೆಮುರಿ ಕಟ್ಟಿ ದರೋಡೆ ಮಾಡಿದ ನಗದು, ಚಿನ್ನ ,ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡ ಉಭಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಉರ್ವ ಠಾಣಾ ಇನ್ಸ್ಪೆಕ್ಟರ್ ಭಾರತಿ ಅವರಿಗೆ ಕರೆ ಮಾಡಿ ಅವರ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.