ಮುತ್ತೂರು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.



ಸಭೆಯನ್ನು ನೋಡೆಲ್ ಅಧಿಕಾರಿಯಾದ ಮಹಾಲಕ್ಷ್ಮಿ ಬೋಳಾರ್ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಗಳೂರು ಇವರು ನಡೆಸಿಕೊಟ್ಟರು .
ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ಮಾಹಿತಿಯನ್ನು ನೀಡಿದರು . ಗ್ರಾಮಸ್ಥರು ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಮನವಿ ಮಾಡಿದರು . ಸಣ್ಣ ನೀರಾವರಿ ಇಲಾಖೆ ತೋಡಿನ ಬದಿ ದೊಡ್ಡಳಿಕೆಯಿಂದ ಮುತ್ತೂರು ವರೆಗೆ 8 ಕಿ.ಮೀ ವರೆಗೆ ರಸ್ತೆ ಮಾಡಲು ಅನುಮತಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು .ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಈಗಾಗಲೇ ಪಂಚಾಯತ್ ನಿಂದ ಸಣ್ಣ ನೀರಾವರಿ ಇಲಾಖೆಗೆ ಪತ್ರ ಮುಖೇನ ಕಾಂಕ್ರೀಟ್ ರಸ್ತೆ ಮಾಡಲು ನಿರಾಕ್ಷೇಪನ ಪತ್ರವನ್ನು ನೀಡಬೇಕೆಂದು ತಿಳಿಸಿದ್ದೇವೆ ಎಂದರು , ಗ್ರಾಮಸ್ಥರ ಸಮ್ಮುಖದಲ್ಲಿಯೇ ಕಳುಹಿಸಿದ ಮನವಿ ಪತ್ರವನ್ನು ಗ್ರಾಮಸ್ಥರ ಒತ್ತಾಯದ ಮೇರೆಗೆ ಪಿಡಿಓ ರವರು ಓದಿ ಹೇಳಿದರು .


ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಕಿರಣ್ ರಾಜ್ ಇವರು ಇತ್ತೀಚೆಗೆ ಹೆಚ್ಚುತ್ತಿರುವ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸಿ , ನಮ್ಮ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ವಿನಂತಿಸಿದರು . ಪೊಲೀಸ್ ಇಲಾಖೆಯ ಕೆಂಚಪ್ಪ ಎನ್.ಎಸ್ ಇವರು ಸೈಬರ್ ಕಳ್ಳರಿಂದ ಜಾಗರೂಕರಾಗಿರಬೇಕು ನಿಮ್ಮ ಖಾತೆಯ ಹಣವನ್ನು OTP ಅಥವಾ ಹೊಸ APPLICATION ಮೂಲಕ ದೋಚಿದರೆ ತಕ್ಷಣ ನೀವು 1930 ನಂಬರಿಗೆ ಕರೆ ಮಾಡಿ ವಿಷಯ ತಿಳಿಸಿ ತಕ್ಷಣವೇ ಹತ್ತಿರದ ಪೊಲೀಸ್ ಇಲಾಖೆಗೆ ದೂರು ಕೊಡಬೇಕು ಎಂದು ಮಾಹಿತಿ ನೀಡಿದರು . ಮುತ್ತೂರಿನ ತಾರೆಮಾರ್ ಎಂಬಲ್ಲಿ ಪಿಡಬ್ಲುಡಿ ರಸ್ತೆ ಪಕ್ಕ ಗುಡ್ಡ ಜರಿಯುವ ಸಂಭವವಿದ್ದು ಮನೆಗಳಲಿಗೆ ಹಾನಿಯಾಗುವ ಸಂಭವವಿರುವುದನ್ನು ಕಂಡು ಗ್ರಾಮಸ್ಥರು ಕೂಡಲೇ ಅದಕ್ಕೆ ತಡೆಗೋಡೆ ನಿರ್ಮಿಸಬೇಕೆಂದು ಒತ್ತಾಯಿಸಿದರು , ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಅಲ್ಲಿನ ಮನೆಯವರಿಗೆ ಕಾಳಜಿ ಕೇಂದ್ರಕ್ಕೆ ತೆರಳಲು ಅಧಿಕಾರಿಗಳು ಹೇಳಿದ್ದು ಅವರು ನಮಗೆ ಸಾಧ್ಯವಿಲ್ಲ ಎಂದು ಹೇಳಿದ್ದು ಬಾಡಿಗೆ ಮನೆ ವ್ಯವಸ್ಥೆ ಮಾಡಲು ತಿಳಿಸಿದ್ದೇವೆ ಆದರೆ ತಹಶೀಲ್ದಾರರು ಸರಕಾರದಿಂದ ಅದಕ್ಕೆ ಸೌಲಭ್ಯವಿಲ್ಲ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಎಂದರು . ಜರಿಯಲಿರುವ ಗುಡ್ಡಕ್ಕೆ ತಡೆಗೋಡೆ ಕಟ್ಟಲು ಅನುದಾನ ಬೇಕೆಂದು ಈಗಾಗಲೇ ಪಂಚಾಯತ್ ನಿಂದ ಪತ್ರವನ್ನು ಕಳುಹಿಸಿದ್ದೇವೆ ಎಂದರು .
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸುಶ್ಮಾ , ಸದಸ್ಯರಾದ ಪುಷ್ಪಾ ನಾಯ್ಕ್ , ಸತೀಶ್ ಪೂಜಾರಿ ಬಳ್ಳಾಜೆ , ಜಗದೀಶ್ ದುರ್ಗಾಕೋಡಿ , ಮಾಲತಿ , ತೋಮಸ್ ಹೆರಾಲ್ಡ್ ರೋಸರಿಯೋ , ತಾರಾನಾಥ ಕುಲಾಲ್ , ವನಿತಾ , ರುಕ್ಮಿಣಿ , ಶಶಿಕಲಾ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮಾಲಿನಿ , ಮಂಗಳೂರು ಪೂರ್ವ ವಲಯ ಅಬಕಾರಿ ನಿರೀಕ್ಷಕರು ಸುಮ ಜಿ.ಎಮ್ , ಮೆಸ್ಕಾಂ ಇಲಾಖೆ ಶಾಖಾಧಿಕಾರಿ ವೀರಭದ್ರಪ್ಪ , ಸಮಾಜ ಇಲಾಖೆ ಮೇಲ್ವಚಾರಕರಾದ ಭಾಗ್ಯವತಿ , ಶಿಕ್ಷಣ ಇಲಾಖೆಯ ಪುಷ್ಪಾವತಿ , ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿ ಕೆ.ಜಿ ಮನೋಹರ್ , KPS ಮುತ್ತೂರು ಕಾಲೇಜಿನ ಪ್ರಾಂಶುಪಾಲರಾದ ರಘುರಾಮ ನಾಯಕ್ , ಕಂದಾಯ ನಿರೀಕ್ಷಕರಾದ ಪೂರ್ಣ ಚಂದ್ರ ತೇಜಸ್ವಿ , ಗ್ರಾಮ ಲೆಕ್ಕಾಧಿಕಾರಿ ಮುತ್ತಪ್ಪ ಬಡಿಗೇರ್ ಉಪಸ್ಥಿತರಿದ್ದರು . ಮುತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್ ನಾಯ್ಕ್ ಸ್ವಾಗತಿಸಿ ವಂದಿಸಿದರು . ಕಾರ್ಯದರ್ಶಿ ವಸಂತಿ ಹಿಂದಿನ ಗ್ರಾಮ ಸಭೆ ನಿರ್ಣಯವನ್ನು ಓದಿ ಹೇಳಿದರು , ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು .