ಮಂಗಳೂರು ಸಂತ ಅಗ್ನೆಸ್ (ಸ್ವಾಯತ್ತ) ಕಾಲೇಜಿನ ಹನ್ನೊಂದನೆ ಪದವಿ ಪ್ರದಾನ ಸಮಾರಂಭ ಜುಲೈ 13, 2024 ರಂದು ಪೂರ್ವಾಹ್ನ 11.00 ಗಂಟೆಗೆ ಜರಗಲಿದೆ.



ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರಾದ ಪ್ರೊ. ಡಾ. ಪಿ. ಎಲ್. ಧರ್ಮರವರು. ಮುಖ್ಯ ಅತಿಥಿಗಳಾಗಿ. ಭಾಗವಹಿಸಿ . ಪದವಿ ಪ್ರದಾನ ಭಾಷಣಗೈಯಲಿರುವರು.
ಅಪೊಸ್ತೊಲಿಕ್ ಕಾರ್ಮೆಲ್ ಸಂಸ್ಥೆಯ ಪ್ರೊವಿನ್ಸಿಯಲ್ ಸುಪೀರಿಯರ್ ಸಿ. ಮರಿಯ ಶಮಿತ ಎ.ಸಿ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಲಿರುವರು.
ಪ್ರಾಂಶುಪಾಲೆ ಸಿ| ಡಾ| ಎಂ. ವೆನಿಸ್ಸಾ ಎ.ಸಿ., ರಿಜಿಸ್ಟ್ರಾರ್ ಡಾ. ನ್ಯಾನ್ಸಿ ವಾಜ್ ಆಡಳಿತ ಡೀನ್ ಶುಭರೇಖಾ, ವಿವಿದ ವಿಭಾಗದ ಮುಖ್ಯಸ್ಥರು (ಡೀನ್), ಆಡಳಿತ ಮಂಡಳಿ ಹಾಗೂ ಶೈಕ್ಟಣಿಕ ಮಂಡಳಿ ಸದಸ್ಯರು ಉಪಸ್ಥಿತರಿರುವರು.


594 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದು 17 ರ್ಯಾಂಕ್ ವಿಜೇತರು ವಿಶೇಷ ಪುರಸ್ಕಾರ ಪಡೆಯಲಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.