ಹಿರಿಯಡ್ಕ: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಹೊಂದಿದ್ದ ಬಾಲಕನೋರ್ವ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಜು.3ರಂದು ನಡೆದಿದೆ.
ಮೃತರನ್ನು ಅಂಜಾರು ಗ್ರಾಮದ ಪ್ರೇಮಾ ಎಂಬವರ ಮಗ ಪ್ರಜ್ವಲ್(17) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ವಿಪರೀತ ಮದ್ಯಪಾನ ಮಾಡುತ್ತಿದ್ದನು ಮನೆಯವರ ಬುದ್ದಿವಾದ ಹೇಳುತ್ತಿದ್ದರೂ ಕೇಳುತ್ತಿರಲಿಲ್ಲ ಎನ್ನಲಾಗಿದೆ. ಜು.೩ ರಂದು ಮದ್ಯರಾತ್ರಿ ಮೂತ್ರ ಮಾಡಲು ಬಾತ್‌ರೂಂಗೆ ಹೋದಾಗ ಅಸ್ವಸ್ಥನಾಗಿ ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ತಿಳಿದು ಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.