ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಯಿತು.
ಮುತ್ತೂರು ಹಾಗೂ ಕೊಳವೂರು ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಯದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ಗುಡ್ಡಗಳು ಜರಿಯದಂತೆ ತಡೆಗೋಡೆ ನಿರ್ಮಿಸಲು ಅನುದಾನವನ್ನು ಕಲ್ಪಿಸಿಕೊಡಬೇಕೆಂದು ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಇವರು ಮನವಿ ಮಾಡಿದರು. ಹಾಗೂ ಕೊಳವೂರು ಗ್ರಾಮದ ಅಟ್ಟೆಪದವು ಮತ್ತು ಮುತ್ತೂರು ಗ್ರಾಮದ ತಾರೆಮಾರ್ ಎಂಬಲ್ಲಿ ಗುಡ್ಡದಲ್ಲಿ ಮನೆಗಳಿದ್ದು ಅವರಿಗೆ ಸಮತಟ್ಟಾದ ನಿವೇಶನ ಮಂಜೂರು ಮಾಡಬೇಕೆಂದು ಕಂದಾಯ ಇಲಾಖೆಗೆ ಮನವಿ ಮಾಡಿದರು . ಅಭಿವೃದ್ಧಿ ಅಧಿಕಾರಿಯಾದ ಪ್ರಮೋದ್ ಎಸ್ ನಾಯ್ಕ್ ಹನಿಯಾದ ಸ್ಥಳಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರು . ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಶ್ಮಾ , ಸದಸ್ಯರುಗಳಾದ ಜಗದೀಶ್ ದುರ್ಗಾಕೋಡಿ , ತಾರಾನಾಥ ಕುಲಾಲ್ , ತೋಮಸ್ ಹೆರಾಲ್ಡ್ ರೋಸರಿಯೋ , ಶಶಿಕಲಾ , ರುಕ್ಮಿಣಿ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್ ನಾಯ್ಕ್ , ಕಾರ್ಯದರ್ಶಿ ವಸಂತಿ ಗ್ರಾಮ ಲೆಕ್ಕಾಧಿಕಾರಿ ಮುತ್ತಪ್ಪ , ಬಜ್ಪೆ ಠಾಣೆ ಬೀಟ್ ಪೊಲೀಸ್ ಪರುಶುರಾಮ್ , ಆರೋಗ್ಯ ಕೇಂದ್ರ ಕುಪ್ಪೆಪದವು ಇದರ ವೈದ್ಯಾಧಿಕಾರಿ , ಮೆಸ್ಕಾಂ ಶಾಖಾಧಿಕಾರಿ ವೀರಭದ್ರಪ್ಪ , ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಗುರು , ಸಣ್ಣ ನೀರಾವರಿ ಇಲಾಖೆ ಕಿರಿಯ ಇಂಜಿನಿಯರ್ ರವೀಶ್ , ಪದವಿ ಪೂರ್ವ ಕಾಲೇಜು ಮುತ್ತೂರು ಇಲ್ಲಿನ ಪ್ರಾಧ್ಯಾಪಕರಾದ ನಿರಂಜನ್ , ಪ್ರಾಥಮಿಕ ಶಾಲೆ ಬೊಳಿಯ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ , ಕೆ ಪಿ ಎಸ್ ಪ್ರಾಥಮಿಕ ಮುಖ್ಯೋಪಾಧ್ಯಾಯರಾದ ರೋಹಿಣಿ , ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು , ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು .