ಬಹುಪಾಲು ಮುಸ್ಲಿಂ ಜನಸಂಖ್ಯೆಯಿರುವ ತಜಕಿಸ್ತಾನ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿದೆ. ಹಿಜಾಬ್ ನಿಷೇಧದ ಜೊತೆಗೆ, ಎರಡು ಪ್ರಮುಖ ಇಸ್ಲಾಮಿಕ್ ಹಬ್ಬಗಳಾದ ಈದ್ ಅಲ್-ಫಿತರ್ ಮತ್ತು ಈದ್ ಅಲ್-ಅಧಾದಲ್ಲಿ ಮಕ್ಕಳು ಭಾಗವಹಿಸುವುದನ್ನು ಸಹ ತಜಕಿಸ್ತಾನದಲ್ಲಿ ನಿಷೇಧಿಸಲಾಗಿದೆ.
ಹಿಜಾಬ್ ಮತ್ತು ಮಕ್ಕಳ ಈದ್ ಆಚರಣೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಕಾನೂನುಗಳಿಗೆ ಜೂನ್ 19 ರಂದು ಮಜ್ಲಿಸಿ ಮಿಲ್ಲಿ (ತಜಕಿಸ್ತಾನದ ಸಂಸತ್ತಿನ ಮೇಲಿನ ಚೇಂಬರ್) ಒಪ್ಪಿಗೆ ನೀಡಿದೆ. ತಜಕಿಸ್ತಾನದ ಸಂಸತ್ ಆದ ‘ತಾಜಿಕ್ ಸಂಸತ್ತಿನ’ ಕೆಳ ಚೇಂಬರ್ ಮಜ್ಲಿಸಿ ನಮೋಯಂಡಗಾನ್ ಮೇ 8 ರಂದು ಶಾಸನವನ್ನು ಅನುಮೋದಿಸಿತ್ತು.
ಇಸ್ಲಾಮಿಕ್ ಹೆಡ್ ಸ್ಕಾರ್ಫ್ ಆಗಿರುವ ಹಿಜಾಬ್ ನಿಷೇಧಿಸಿರುವ ತಜಕಿಸ್ತಾನ ಸರ್ಕಾರ ಮುಸ್ಲಿಂ ಮಹಿಳೆಯರು ಸ್ಥಳೀಯ ಶೈಲಿಯಲ್ಲಿ ತಮ್ಮ ಕೂದಲನ್ನು ಮುಚ್ಚಲು ಅನುಮತಿ ನೀಡಿದೆ.