ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಸದ್ಯ ಪೊಲೀಸ್ ಆಯುಕ್ತಾರಾಗಿದ್ದಾರೆ. ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.
ಮಾಜಿ ಶಾಸಕರು ಪೊಲೀಸ್ ಆಯುಕ್ತರಾಗಿ ಬಣ್ಣ ಹಚ್ಚಿರುವುದು ಡಿ ಯೋಗರಾಜ್ ನಿರ್ದೇಶನದ ‘ಲುಡೋ’ ಚಿತ್ರಕ್ಕಾಗಿ. ಹೌದು ಈ ಸಿನಿಮಾ ಚಿತ್ರೀಕರಣದ ಕೆಲ ವಿಡಿಯೋ ಕ್ಲಿಪ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಲುಡೋ’ ಚಿತ್ರದಲ್ಲಿ ಬಾವಾ ಅವರು ಪೊಲೀಸ್ ಆಯುಕ್ತರಾಗಿ ಕಾಣಿಸಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರವು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ.