Home ಕರಾವಳಿ ಮಂಗಳೂರು: ಜೂ.20ರಿಂದ ಜು. 20ರ ವರೆಗೆ ಉಚಿತ ಚರ್ಮಗಂಟು ಲಸಿಕೆ ಅಭಿಯಾನ

ಮಂಗಳೂರು: ಜೂ.20ರಿಂದ ಜು. 20ರ ವರೆಗೆ ಉಚಿತ ಚರ್ಮಗಂಟು ಲಸಿಕೆ ಅಭಿಯಾನ

0

ಮಂಗಳೂರು: ಚರ್ಮಗಂಟು ರೋಗವು ವೈರಸ್‌ನಿಂದ ಬರುವ ಸಾಂಕ್ರಮಿಕ ರೋಗವಾಗಿದ್ದು, ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದ್ದು, ಬಳಿಕ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಈ ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾಧ್ಯತೆಯಿದ್ದು ಶೇ. 2ರಿಂದ ಶೇ. 5ರು ಜಾನುವಾರುಗಳು ಈ ರೋಗದಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುನ್ನೆಚ್ಚರಿಕ ಕ್ರಮವಾಗಿ ಪ್ರತೀ ಜಾನುವಾರುಗಳಿಗೆ ಸಮರೋಪಾದಿಯಲ್ಲಿ ಜಿಲ್ಲೆಯಾದ್ಯಂತ ಜೂ. 20ರಿಂದ ಜು. 20ರ ವರೆಗೆ ಚರ್ಮ ಗಂಟು ವಿರುದ್ದ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಈ ಹಿಂದೆ ಲಸಿಕೆಯನ್ನು ಹಾಕಿಸಿದರೂ ಸಹಾ ಹೈನುಗಾರರು ಈ ಬಾರಿಯೂ ಕೂಡ ತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಿ ದ.ಕ. ಜಿಲ್ಲೆಯಲ್ಲಿರುವ ಜಾನುವಾರುಗಳನ್ನು ಚರ್ಮಗಂಟು ರೋಗದಿಂದ ರಕ್ಷಿಸಬೇಕು. ಈ ಬಗ್ಗೆ ಹೈನುಗಾರರು ಲಸಿಕೆಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಅಥವಾ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಪಶುಪಾಲನ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here