Home ಕರಾವಳಿ ʻಪಿಎಂ ಕಿಸಾನ್‌ʼ ನಿಧಿಯ 17ನೇ ಕಂತು ಬಿಡುಗಡೆ: ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಸದ ಬ್ರಿಜೇಶ್...

ʻಪಿಎಂ ಕಿಸಾನ್‌ʼ ನಿಧಿಯ 17ನೇ ಕಂತು ಬಿಡುಗಡೆ: ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಸದ ಬ್ರಿಜೇಶ್ ಚೌಟ ಭೇಟಿ

0

ಮೋದಿ ಸರಕಾರದ ಮೂರನೇ ಅವಧಿಯ ಮೊದಲ ಕಾರ್ಯವಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತನ್ನು ನೇರ ವರ್ಗಾವಣೆ ಮೂಲಕ ಬಿಡುಗಡೆಗೊಳಿಸುವ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ.

ಈ ಯೋಜನೆಯಿಂದ 9.26 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸನ್ನು ಕಂಡ ಕೃಷಿಕರಾದ ಶ್ರೀ ಚಂದ್ರಶೇಖರ ಗಟ್ಟಿ, ಶ್ರೀ ದಯಾನಂದ ಕುಲಾಲ್ ಮತ್ತು ಶ್ರೀ ಕೆನ್ಯೂಟ್ ಅರಾಹ್ನ ಅವರನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here