ಪುತ್ತೂರು : ಬೊಳುವಾರಿನ ಉದ್ಯಮಿಯೊಬ್ಬರಿಗೆ ಅನಾಮಿಕರು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 4 ದಿನಗಳ ಹಿಂದೆ ಕರೆ ಮಾಡಿದ ಅನಾಮಿಕ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, ಸಿಬಿಐ ಕ್ರೈಂ ಬ್ರ‍್ಯಾಂಚ್‌ನಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಉದ್ಯಮಿಯ ಪುತ್ರನ ಹೆಸರು ಹೇಳಿ, ನಿಮ್ಮ ಮಗನನ್ನು ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದೇವೆ. ನಿಮ್ಮ ಮಗ ಸೇರಿದಂತೆ ಮೂವರನ್ನು ಈ ಕೇಸ್‌ನಲ್ಲಿ ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಉದ್ಯಮಿಯು ಪುತ್ರನ ಜತೆ ಮಾತನಾಡಿಸಿ ಎಂದಾಗ ಆ ಕಡೆಯಿಂದ ರಾಜಿ ಮಾಡೋಣ ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟರು. ಇದರಿಂದ ಸಂಶಯಗೊಂಡ ಉದ್ಯಮಿ, ಹಣ ನೀಡುವುದಿಲ್ಲ, ಜೈಲಿಗೆ ಕರೆದುಕೊಂಡು ಹೋಗಿ ಎಂದಾಗ ಕರೆ ಕಟ್ ಆಯಿತು. ಆ ಬಳಿಕ ಉದ್ಯಮಿ ಅವರು ಪುತ್ರನಿಗೆ ಕರೆ ಮಾಡಿ ವಿಚಾರಿಸಿದ್ದು ಪುತ್ರ ಯಾವುದೇ ತೊಂದರೆ ಇಲ್ಲದೆ ಇರುವುದು ಖಚಿತವಾಗಿತ್ತು. ಅನಾಮಿಕರು ಕೆಲವು ದಿನ ಕಳೆದು ಉದ್ಯಮಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಉದ್ಯಮಿ ಅವರು ಫೋನ್ ಪೇ ನಂಬರ್ ಕಳಿಸಲು ಹೇಳಿದ್ದರು. ನಂಬರ್ ಹೇಳಿದ ಅನಾಮಿಕ 50,000 ರೂ. ಹಾಕುವಂತೆ ತಿಳಿಸಿದ್ದ. ಅರ್ಧ ಗಂಟೆ ಕಳೆದು ಹಣ ಕಳಿಸುತ್ತೇನೆ ಎಂದು ಹೇಳಿ ಉದ್ಯಮಿ ಕರೆ ಮಾಡಿದ್ದಾರೆ. ಪೋನ್ ನಂಬರ್ ಅನ್ನು ಟ್ರೂಕಾಲರ್‌ನಲ್ಲಿ ಪರಿಶೀಲಿಸಿದಾಗ ಫಝಲ್ ಎಂಬ ಹೆಸರು ಬಂದಿದ್ದು ಪಾಕಿಸ್ತಾನದ ಕೋಡ್ ಸಂಖ್ಯೆ ಆರಂಭವಾಗುವ ನಂಬರ್ ಆಗಿತ್ತು ಎಂದು ತಿಳಿದುಬಂದಿದೆ. ವಿಪ್ರಕರಣದ ಬಗ್ಗೆ ಗೋಪಾಲ ಎಂ.ರವರು ಪುತ್ತೂರು ನಗರ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.
Home ಕರಾವಳಿ ಪುತ್ತೂರು: ಉದ್ಯಮಿಗೆ ನಿಮ್ಮ ಮಗನನ್ನು ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದೇವೆ ಎಂದು ಅನಾಮಿಕ ಕರೆ...