ಬೆಂಗಳೂರು : ದರ್ಶನ್ & ಗ್ಯಾಂಗ್ ನಿಂದ ಹತ್ಯೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದ್ದು, ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ನಡೆಸಿರುವುದು ತಿಳಿದುಬಂದಿದೆ.
ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್ ಬಹಿರಂಗಗೊಂಡಿದ್ದು, ವರದಿಯಲ್ಲಿ ರೇಣುಕಾಸ್ವಾಮಿ ದೇಹದ ಮೇಲೆ 34 ಕಡೆ ಗಾಯಗಳಾಗಿದ್ದು, ರೇಣುಕಾಸ್ವಾಮಿ ಎದೆಗೆ ಕಾಲಿನಿಂದ ಒದ್ದಿರುವುದು ಗುರುತಿದೆ.
ಪಕ್ಕೆಲುಬು ತುಂಡಾಗಿ ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ. ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಆರೋಪಿಗಳ ಹೊಡೆತಕ್ಕೆ ದೇಹದ ಹಲವಡೆ ರಕ್ತ ಹೆಪ್ಪುಗಟ್ಟಿದೆ. ಜೊತೆಗೆ ಕರೆಂಟ್ ಶಾಕ್ ನೀಡಿರುವುದು ಸಹ ಬಹಿರಂಗಗೊಂಡಿದೆ. ಕೊಲೆ ಆರೋಪಿಗಳಾದ ಎ3 ಆರೋಪಿ ಪವನ್ ಮತ್ತು ಎ5 ಆರೋಪಿ ನಂದೀಶ್ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಮಾಡಿದ್ದ ಎನ್ನುವ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ & ಗ್ಯಾಂಗ್ ಬೆಂಗಳೂರಿಗೆ ಕರೆಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಇದೀಗ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.