Home ಕರಾವಳಿ ಮಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಇದರ ಸಹಭಾಗಿತ್ವದಲ್ಲಿ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ ಕಾರ್ಯಕ್ರಮ

ಮಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಇದರ ಸಹಭಾಗಿತ್ವದಲ್ಲಿ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ ಕಾರ್ಯಕ್ರಮ

0

ಮಂಗಳೂರು ತಾಲೂಕು ಮಹಿಳಾಮಂಡಲಗಳ ಒಕ್ಕೂಟ ಉರ್ವ ಸ್ಟೋರ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮಂಗಳೂರು ಇದರ ಸಹಭಾಗಿತ್ವದಲ್ಲಿ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ ಕಾರ್ಯಕ್ರಮವು ಇತ್ತೀಚಿಗೆ ಉರ್ವ ಸ್ಟೋರ್ ನ ಮಂಗಳೂರು ತಾಲೂಕು ಒಕ್ಕೂಟಗಳ ಸಭಾಂಗಣ ವನಿತಾಂಗಣ ದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪುರುಷೋತ್ತಮ ಬಲ್ಯಾಯರವರು ಜಾನಪದ ಅಂದು ಇಂದು ಮುಂದು ಅನ್ನುವ ವಿಚಾರದಲ್ಲಿ ಮಾತನಾಡಿ ಜಾನಪದ ಅನ್ನುವ ವಿಷಯ ಸಾಗರದಷ್ಟು ಆಳವಾದ ವಿಚಾರಗಳ್ಳನು ಹೊಂದಿದ್ದು ಪರಿಸರ ಮತ್ತು ಜನರ ಜೀವನ ಶೈಲಿ ಯ ಅವಿನಾಭಾವವೇ ಜಾನಪದ ಎಂದರು, ಜಾನಪದ ಪದ್ಧತಿಯಂತೆ ನಮ್ಮ ಆಹಾರ ಕ್ರಮಗಳನ್ನು ರೊಢಿಸಿಕೊಂಡಾಗ ಸ್ವಸ್ತ ಆರೋಗ್ಯಪಡೆಯಲು ಸಾಧ್ಯ ಎಂದರು, ಜಾನಪದದ ವಿಷಯದಲ್ಲಿ ಅನೇಕ ವಿವರಣೆಗಳನ್ನು ತಿಳಿಸಿ ಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಚಂಚಲ ತೇಜೋಮಯ ನಿಯೋಜಿತ ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು. ದ. ಕ. ಜಿಲ್ಲಾ ಘಟಕ ಮಂಗಳೂರು ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀಯುತ ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್ ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ, ಮುಖ್ಯ ಅತಿಥಿಗಳಾಗಿ ಶ್ರೀ ರಾಜೇಶ್ ಸ್ಕೈಲಾರ್ಕ್,ಶ್ರೀ ತಾರಾನಾಥ್ ಶೆಟ್ಟಿ ಬೋಳಾರ, ಶ್ರೀ ರಾಜೇಶ್ ಆಳ್ವ, ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು , ಶ್ರೀ ಜನಾರ್ಧನ ಬುಡೋಳಿ, ಶ್ರೀ ದಿನ್ ರಾಜ್ ರವರು, ಶ್ರೀಮತಿ ಪ್ರಮೀಳಾ ಸಾಯಿ ಪ್ರಿಯ, ಶ್ರೀಮತಿ ಪದ್ಮಶ್ರೀ ಭಟ್ ನಿಡ್ಡೋಡಿ, ಶ್ರೀಮತಿ ಡಾ.ಮಾಲತಿ ಶೆಟ್ಟಿ .ಮಹಿಳಾ ಒಕ್ಕೂಟದ ಗೌರವ ಸಲಹೆಗಾರರಾದ ಶ್ರೀಮತಿ ದೇವಕಿ ಅಚ್ಚುತ ಉಪಾಧ್ಯಕ್ಷರಾದ ಶ್ರೀಮತಿ ಮನೋರಮ ಉಮೇಶ್ ಭಾಗವಹಿಸಿದರು.

ಪದಗ್ರಹಣದಲ್ಲಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಶ್ರೀಮತಿ ಚಂಚಲ ತೇಜೋಮಯ, ಉಪಾಧ್ಯಕ್ಷರಾಗಿ ಶ್ರೀ ಜನಾರ್ದನ ಬುಡೊಳಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶಿವಪ್ರಸಾದ ಕೊಕ್ಕಡ, ಕೋಶಾಧಿಕಾರಿಯಾಗಿ ಶ್ರೀ ಆಶಾಶ್ರೀ ಆರ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ರೇಖಾ ಸುರೇಶ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀ ಪ್ರಶಾಂತ್ ಕಂಕನಾಡಿ, ಗೌರವ ಸಲಹೆಗಾರರಾಗಿ ಶ್ರೀಮತಿ ಅರುಣ ನಾಗರಾಜ್ ಜವಾಬ್ದಾರಿಗಳನ್ನ ಪಡೆದುಕೊಂಡರು.

ರೇಖಾ ಸುರೇಶ್ ರಾವ್ ಪ್ರಾರ್ಥನೆ ಮಾಡಿದರೆ ಶ್ರೀಮತಿ ಆಶಾಶ್ರೀ ದೇವಾಡಿಗ ಸ್ವಾಗತ ಗೈದು ಶ್ರೀ ಶಿವಪ್ರಸಾದ ಕೊಕ್ಕಡ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು ಶ್ರೀಮತಿ ರೇಖಾ ಶೆಟ್ಟಿ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಶ್ರೀಮತಿ ಭಾರತಿ. ಎಂ. ಅನುರಾಧ ರಾಜೀವ್, ಪ್ರೇಮ ಮಾಧವ್, ಲತಾ ಶೆಟ್ಟಿ ,ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here