ಬೆಂಗಳೂರು: ನಟ ದರ್ಶನ್ ಅವರನ್ನು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಪೊಲೀಸರು ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವಿಚಾರಣೆ ನಡೆಸುತ್ತಿದ್ದರು. ಈ ವೇಳೆಯಲ್ಲೇ ಪೊಲೀಸ್ ಠಾಣೆಯ ಮುಂದೆಯೇ ಡಿ ಬಾಸ್ ಗೆ ಜೈ ಎಂಬುದಾಗಿ ಅವರ ಅಭಿಮಾನಿಗಳು ಘೋಷಣೆ ಕೂಗಿದ ಘಟನೆ ನಡೆದಿದೆ.
ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಎಂಬಾತ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಸ ಸಂದೇಶ ಕಳುಹಿಸುತ್ತಿದ್ದನಂತೆ. ಅಲ್ಲದೇ ನಟ ದರ್ಶನ್ ಬಗ್ಗೆಯೂ ಬಗ್ಗೆಯೂ ಕೆಟ್ಟದಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಕೂಡ ಹಾಕುತ್ತಿದ್ದನಂತೆ. ಇದೇ ಕಾರಣಕ್ಕೆ ಅನೇಕ ಬಾರಿ ನಟ ದರ್ಶನ್ ಸೇರಿದಂತೆ ಅವರ ಅಭಿಮಾನಿಗಳು ರೇಣುಕಾಸ್ವಾಮಿಗೆ ಎಚ್ಚರಿಸಿದ್ದರು.
ಆದ್ರೇ ರೇಣುಕಾಸ್ವಾಮಿ ಮಾತ್ರ ತನ್ನ ಚಾಳಿಯನ್ನು ಮುಂದುವರೆಸಿದ್ದನು ಎನ್ನಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಂತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿಕೊಂಡು ಬಂದು, ಬೆಂಗಳೂರಿನ ಶೆಡ್ ಒಂದರಲ್ಲಿ ಕೂಡಿ ಹಾಕಿ. ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ರಾಡ್ ನಿಂದ ಬಲವಾಗಿ ತಲೆಗೆ ಹೊಡೆದ ಪರಿಣಾಮ, ಆತ ಶೆಡ್ ನಲ್ಲೇ ಸಾವನ್ನಪ್ಪಿದ್ದನಂತೆ.
ಮೃತ ಪಟ್ಟಿದ್ದಂತ ರೇಣುಕಾಸ್ವಾಮಿಯನ್ನು ಸಮೀಪದ ಮೋರಿಯೊಂದಕ್ಕೆ ಮೂಟೆಕಟ್ಟಿ ಆರೋಪಿಗಳು ಎಸೆದು ಹೋಗಿದ್ದರಂತೆ. ಮೋರಿಯಲ್ಲಿ ನಾಯಿಗಳು ಮೃತದೇಹವನ್ನು ಎಳೆದಾಡುತ್ತಿದ್ದದ್ದು ಕಂಡಂತ ಡಿಲಿವರಿ ಬಾಯ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಷಯ ತಿಳಿದ ಬಳಿಕ ಕಾಮಾಕ್ಷಿ ಠಾಣೆಯ ಪೊಲೀಸರು ಮೋರಿ ಬಳಿಗೆ ತೆರಳಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಆರಂಭದಲ್ಲಿ ಆತ್ಮಹತ್ಯೆ ಎಂಬುದಾಗಿಯೇ ಭಾವಿಸಿದ್ದಂತ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ಮಾಡಿ ಹತ್ಯೆ ಮಾಡಿರೋದು ತಿಳಿದು ಬಂದಿದೆ. ತನಿಖೆ ಚುರುಕುಗೊಳಿಸಿದಾಗ ಆತ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಎಂಬುದಾಗಿ ಪತ್ತೆಯಾಗಿದೆ. ಜೊತೆಗೆ ಹತ್ಯೆ ಹಿಂದೆ ನಟ ದರ್ಶನ್ ಸೇರಿದಂತೆ 13 ಆರೋಪಿಗಳ ಕೈವಾಡ ಪತ್ತೆಯಾಗಿದೆ.
ದರ್ಶನ್ ಆಪ್ತರಾದ ವಿನಯ್, ಆನಂದ್ , ಕಿರಣ್ ಅವರುಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ನಟ ದರ್ಶನ್ ಹೇಳಿದ್ದರಿಂದ ರೇಣುಕಾಸ್ವಾಮಿ ಹತ್ಯೆ ಮಾಡಿರೋದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಬಳಿಕ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ, ವಿ.ವಿನಯ್, ಆರ್.ನಾಗರಾಜು, ಎಂ ಲಕ್ಷ್ಮಣ್, ಎಸ್ ಪ್ರದೋಶ್, ಕೆ.ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವ ಮೂರ್ತಿ ಹಾಗೂ ರಾಘವೇಂದ್ರ ಆಲಿಯಾಸ್ ರಾಘು ಸೇರಿದಂತೆ 13 ಆರೋಪಿಗಳನ್ನು ಕಾಮಾಕ್ಷಿ ಠಾಣೆಯ ಪೊಲೀಸರು ಬಂಧಿಸಿದ್ದರು.
ಆ ಬಳಿಕ ಅನ್ನಪೂರ್ಣೇಶ್ವರಿ ಠಾಣೆಗೆ ಪ್ರಕರಣ ಶಿಫ್ಟ್ ಮಾಡಲಾಗಿತ್ತು. ಇಲ್ಲಿ ಪೊಲೀಸರು ನಟ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾಗಲೇ ಅವರ ಫ್ಯಾನ್ಸ್ ಡಿ ಬಾಸ್ ಗೆ ಜೈ ಎಂಬುದಾಗಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.