ಕಾರ್ಕಳ: ದಾನದಲ್ಲಿ ಶ್ರೇಷ್ಠವಾದ ದಾನ ರಕ್ತದಾನ, ರಕ್ತದಾನ ಮಾಡಿದರೆ ಎಷ್ಟೋ ಜನ್ಮಗಳ ಪುಣ್ಯ ಸಿಗುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಇವತ್ತು ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ನೇತೃತ್ವದಲ್ಲಿ ವಿನಾಯಕ ಫ್ರೆಂಡ್ಸ್ ಕಾರ್ಕಳ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇಂದು (09-06-2024) ನಡೆಯಿತು.
ಈ ಸಂದರ್ಭದಲ್ಲಿ ವಿನಾಯಕ ಫ್ರೆಂಡ್ಸ್ ಕಾರ್ಕಳ ಇದರ ಮುಖ್ಯಸ್ಥರಾದ ಪ್ರಮೋದ್ ಪಾಟಕ್, ಶ್ರೀನಿವಾಸ್, ಸಾಕ್ಷತ್ ಹಾಗೂ ಇನ್ನಿತರೂ ಉಪಸ್ಥಿತರಿದ್ದರು. ಇದು ಮಾತ್ರವಲ್ಲದೆ ರಕ್ತದಾನ ಮಾಡಿದವರಿಗೆ ಗಿಡ ಕೊಟ್ಟು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ತುಳುನಾಡ ತುಡಾರ್ ಖ್ಯಾತಿಯ ಹಾಗೂ ನಮ್ಮ ತುಳುನಾಡು ಟ್ರಸ್ಟ್ (ರಿ) ನ ರಾಜ್ಯ ಸಂಚಾಲಕರಾದ ಕೀರ್ತಿ ಕಾರ್ಕಳ ಇವರು ರಕ್ತದಾನ ಮಾಡಿ ಎಲ್ಲರಿಗೂ ರಕ್ತದಾನ ಮಾಡುವಂತೆ ಪ್ರೇರೇಪಿಸಿದರು.