Home ಕರಾವಳಿ ಮಂಗಳೂರು ವಕೀಲರ ಸಂಘದ ನೂತನ ಪದಾಧಿಕಾರಿಗಳ ಹಾಗೂ ಅಧ್ಯಕ್ಷರ ಆಯ್ಕೆ ನೂತನ ಅಧ್ಯಕ್ಷರಾಗಿ ಎಚ್ ವಿ...

ಮಂಗಳೂರು ವಕೀಲರ ಸಂಘದ ನೂತನ ಪದಾಧಿಕಾರಿಗಳ ಹಾಗೂ ಅಧ್ಯಕ್ಷರ ಆಯ್ಕೆ ನೂತನ ಅಧ್ಯಕ್ಷರಾಗಿ ಎಚ್ ವಿ ರಾಘವೇಂದ್ರ

0

ಮಂಗಳೂರು ವಕೀಲರ ಸಂಘದ 2024-26 ರ ಪದಾಧಿಕಾರಿಗಳ ಆಯ್ಕೆ, ಚುನಾವಣೆ ಮೂಲಕ ದಿನಾಂಕ 07.06.2024ರಂದು ಮಂಗಳೂರು ವಕೀಲರ ಸಂಘದ ಕಛೇರಿಯ ಆವರಣದಲ್ಲಿ ನಡೆದಿದ್ದು, ಅಧ್ಯಕ್ಷರಾಗಿ ಶ್ರೀ ಎಚ್. ವಿ ರಾಘವೇಂದ್ರ, ಉಪಾಧ್ಯಕ್ಷರಾಗಿ ಶ್ರೀ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶ್ರೀಧರ್ ಎಚ್, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಜ್ಯೋತಿ ಮತ್ತು ಖಜಾಂಚಿಯಾಗಿ ಶ್ರೀ ಗಿರೀಶ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ. ಹಾಗೆಯೇ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀಮತಿ ಆಶಾ ದೀಪ ಪೈ ಎಚ್ @ ಆಶಾ ನಾಯಕ್, ಶ್ರೀ ದೇವದಾಸ್ ರಾವ್, ಶ್ರೀ ಪುರುಶೋತ್ತಮ ಭಟ್ ಎಮ್. ಶ್ರೀ ಚಂದ್ರಹಾಸ ಕೊಟ್ಟಾರಿ, ಶ್ರೀ ಕುಶಾಲಪ್ಪ ಕೆ. ಶ್ರೀ ಪ್ರವೀಣ್ ಕುಮಾರ್ ಅಧ್ಯಪಾಡಿ, ಶ್ರೀಮತಿ ಸುಮನಾ ಶರಣ್, ಕುಮಾರಿ ಆರತಿ, ಶ್ರೀ ಹರೀಶ್ ಕೆ. ಶ್ರೀ ರವಿಕುಮಾರ್ ವಿ. ಶ್ರೀ ರವಿರಾಜ್, ಶ್ರೀ ಗಿರೀಶ, ಶ್ರೀ ಕೃಷ್ಣಪ್ರಸಾದ್ ಕೆ.ವಿ. ಶ್ರೀ ಮಹಮ್ಮದ್ ಅಸ್ಗರ್ ಹಾಗೂ ಕುಮಾರಿ ಅಕ್ಷತಾ ಇವರು ಆಯ್ಕೆಯಾಗಿರುತ್ತಾರೆ. ಚುನಾವಣೆಯನ್ನು ಮಂಗಳೂರು ವಕೀಲರ ಸಂಘದ ಚುನಾವಣಾ ಅಧಿಕಾರಿ ಹಾಗೂ ಹಿರಿಯ ವಕೀಲರಾದ ಶ್ರೀ ಡೆರಿಲ್ ಅಂದ್ರಾದೆ ರವರು ಯಶಸ್ವಿಯಾಗಿ ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here