ಧ್ವನಿ ಬದಲಿಸುವ ಆಪ್ ಬಳಸಿ ಮಹಿಳಾ ಪ್ರೊಫೆಸರ್ ಅಂತ ಬಿಂಬಿಸಿಕೊಂಡಿದ್ದ ಅವಿದ್ಯಾವಂತ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ.
ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಬ್ರಿಜೇಶ್ ಭುಶ್ವಾಹಾ ಧ್ವನಿ ಬದಲಿಸುವ ಆಪ್ ಬಳಸಿ ತಾನು ಮಹಿಳಾ ಟೀಚರ್ ಎಂದು ಬಿಂಬಿಸಿಕೊಂಡು ಮಧ್ಯಪ್ರದೇಶದ ಸಿಂಧಿ ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ.
ವಿದ್ಯಾರ್ಥಿನಿಯರಿಗೆ ಓದಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿದ್ಯಾರ್ಥಿ ವೇತನ ಕೊಡಿಸುತ್ತೇನೆ. ನಾನು ಹೇಳುವ ನಿರ್ಜನ ಜಾಗಕ್ಕೆ ಬಂದರೆ ಅಲ್ಲಿ ಒಬ್ಬ ವ್ಯಕ್ತಿ ಬಂದು ಬೈಕ್ ನಲ್ಲಿ ನನ್ನ ಬಳಿ ಕರೆದುಕೊಂಡು ಬರುತ್ತಾನೆ ಎಂದು ವಿದ್ಯಾರ್ಥಿನಿಯರನ್ನು ಮಹಿಳಾ ಧ್ವನಿಯಲ್ಲಿ ಮಾತನಾಡಿ ನಂಬಿಸುತ್ತಿದ್ದ.
ವಿದ್ಯಾರ್ಥಿನಿಯರು ಬಂದಾಗ ಕಾಡಿಗೆ ಕರೆದೊಯ್ದು ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಬೈಕ್ ನಲ್ಲಿ ಬರುವಾಗ ಹೆಲ್ಮೆಟ್ ಧರಿಸಿ, ಕೈಗೆ ಗ್ಲೌಸ್ ಹಾಕುತ್ತಿದ್ದರಿಂದ ವಿದ್ಯಾರ್ಥಿನಿಯರಿಗೆ ಗುರುತು ಸಿಗುತ್ತಿರಲಿಲ್ಲ ಎಂದು ವಿದ್ಯಾರ್ಥಿಯರು ದೂರಿನಲ್ಲಿ ಆರೋಪಿಸಿದ್ದರು.
ಪೊಲೀಸರು ಈತನ ಪತ್ತೆಗೆ ಸುಳಿವು ಸಿಗದೇ ಪರದಾಡುವಂತಾಯಿತು. ಮಹಿಳೆ ಮಾತನಾಡಿದ್ದರಿಂದ ಮಹಿಳೆ ಮೇಲೆ ಗಮನ ಇತ್ತು. ಅಂತಿಮವಾಗಿ ಮೊಬೈಲ್ ನಂಬರ್ ಆಧರಿಸಿ ತನಿಖೆ ನಡೆಸಿ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿ ತನ್ನ ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಎಸಗಿದ್ದು, ವಿದ್ಯಾರ್ಥಿನಿಯರನ್ನು ನಂಬಿಸಲು ಧ್ವನಿ ಬದಲಿಸುವ ಆಪ್ ಬಳಸಿದ್ದಾಗಿ ಬಹಿರಂಗಪಡಿಸಿದ್ದಾನೆ.