ಬೆಂಗಳೂರು : ರಾಮೇಶ್ವರಂ ಬಾಂಬ್ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕರ್ನಾಟಕ ಮೂಲದ ಇಬ್ಬರು ವೈದ್ಯರು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ ಐಎ ಅಧಿಕಾರಿಗಳು ಬೆಂಗಳೂರು ಸೇರಿದಂತೆ ದೇಶಾದ್ಯಂತ ದಾಳಿ ನಡೆಸಿದ್ದು, ಈ ವೇಳೆ ಪ್ರಕರಣದಲ್ಲಿ ಇಬ್ಬರು ಕರ್ನಾಟಕ ಮೂಲದ ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ತಮಿಳುನಾಡಿನ ನಾರಾಯಣಗುರು ಖಾಸಗಿ ಆಸ್ಪತ್ರೆಯ ವೈದ್ಯರು ಶಂಕಿತ ಉಗ್ರರಾದ ಮತೀನ್ ಶಾಜೀಬ್ ಗೆ ಹಣ ಸಂದಾಯ ಮಾಡಿದ ಆರೋಪದ ಮೇಲೆ ಎನ್ ಐಎ ಅಧಿಕಾರಿಗಳು ಖಾಸಗಿ ಆಸ್ಪತ್ರೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸ್ಫೋಟವನ್ನು ಯೋಜಿಸಿ ಕಾರ್ಯಗತಗೊಳಿಸಿದ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತೀನ್ ತಾಹಾ ಅವರ ವಿಚಾರಣೆಯ ಸಮಯದಲ್ಲಿ ಸಂಗ್ರಹಿಸಿದ ನಿರ್ದಿಷ್ಟ ಮಾಹಿತಿ ಮತ್ತು ಮಾಹಿತಿಯ ಆಧಾರದ ಮೇಲೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 12. ರಂದು ಕೋಲ್ಕತ್ತಾ ಬಳಿಯ ಲಾಡ್ಜ್ ನಿಂದ ಅವರನ್ನು ಬಂಧಿಸಲಾಯಿತು.
ದಾಳಿ ನಡೆಸಿದ ಸ್ಥಳಗಳ ವಿವರಗಳನ್ನು ಏಜೆನ್ಸಿ ಇನ್ನೂ ಬಹಿರಂಗಪಡಿಸಿಲ್ಲ. ಶಿವಮೊಗ್ಗದಲ್ಲಿ ಐಸಿಸ್ ಸಂಬಂಧ ಹೊಂದಿದ್ದ ತಾಹಾ ಮತ್ತು ಶಾಜಿಬ್ ಅವರನ್ನು 42 ದಿನಗಳ ಹುಡುಕಾಟದ ನಂತರ ಬಂಧಿಸಲಾಯಿತು.