Home ಕರಾವಳಿ ಮಂಗಳೂರು: ಮೇ 31ರಿಂದ ಜೂನ್ 2ರವರೆಗೆ ಸಸಿಹಿತ್ಲು ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆ

ಮಂಗಳೂರು: ಮೇ 31ರಿಂದ ಜೂನ್ 2ರವರೆಗೆ ಸಸಿಹಿತ್ಲು ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆ

0

ಮಂಗಳೂರು: ನಗರದ ಸಸಿಹಿತ್ಲು ಬೀಚ್‌ನಲ್ಲಿ ಮೇ 31 ರಿಂದ ಜೂನ್ 2 ವರೆಗೆ ಸರ್ಫಿಂಗ್ ಸ್ಪರ್ಧೆ ನಡೆಯಲಿದೆ. ಭಾರತದಲ್ಲಿ ಸರ್ಫಿಂಗ್ ಮತ್ತು ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಕ್ರೀಡೆಗಳ ಆಡಳಿತ ಮಂಡಳಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ)ವು ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2024 ರ ಇಂಡಿಯನ್ ಓಪನ್ ಸರ್ಫಿಂಗ್ (ಐಒಎಸ್) ಐದನೇ ಆವೃತ್ತಿ ನಡೆಯಲಿದೆ. ಇಂಟರ್‌ನ್ಯಾಶನಲ್ ಸರ್ಫಿಂಗ್ ಅಸೋಸಿಯೇಷನ್‌ನಿಂದ ಮಾನ್ಯತೆ ಪಡೆದಿರುವ ಈ ಪ್ರೀಮಿಯರ್ ಸರ್ಫಿಂಗ್ ಸ್ಪರ್ಧೆಯನ್ನು ಮಂತ್ರ ಸರ್ಫ್ ಕ್ಲಬ್ ಕರ್ನಾಟಕದ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಆಯೋಜಿಸಲಿದೆ. ಭಾರತದಲ್ಲಿ ಅಗ್ರ ಶ್ರೇಯಾಂಕದ ಸರ್ಫರ್‌ಗಳು ಈ ಸ್ಪರ್ಧೆಯಲ್ಲಿ‌‌ ಭಾಗವಹಿಸಲಿದ್ದಾರೆ. ಪುರುಷರ ಓಪನ್, ಮಹಿಳಾ ಓಪನ್, 16 ವಯಸ್ಸಿನೊಳಗಿನ ಹುಡುಗರು ಮತ್ತು 16 ವಯಸ್ಸಿನೊಳಗಿನ ಹುಡುಗಿಯರ ವಿಭಾಗವೆಂದು ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.


LEAVE A REPLY

Please enter your comment!
Please enter your name here