ಮಂಗಳೂರು ಸೇರಿದಂತೆ ದ.ಕನ್ನಡ ಜಿಲ್ಲೆಯ ಹಲವೆಡೆ & ಉಡುಪಿಯಲ್ಲಿ ಬಿಸಿಲಿನ ಬೇಗೆ, ತಾಪಮಾನ ಹೆಚ್ಚಳದ ಪರಿಣಾಮ ಎಳನೀರಿನ ಬೆಲೆ ಗಗನಕ್ಕೇರಿದೆ.
ಮಂಗಳೂರು ಹಾಗೂ ಉಡುಪಿಯಲ್ಲಿ ಎಳನೀರಿನ ದರ ಸುಮಾರು 60 ರೂ.ಗೆ ಏರಿಕೆಯಾಗಿದೆ. ಈ ಮಧ್ಯೆ, ಪೂರೈಕೆ ಕೊರತೆಯೂ
ಉಂಟಾಗಿದೆ.
ಸಾಕಷ್ಟು ಪೂರೈಕೆ ಇಲ್ಲದ ಮತ್ತು ಮಾರಾಟ ಹೆಚ್ಚಿರುವ ಕಾರಣ ಬೆಳಗ್ಗೆ 11 ಗಂಟೆ ಸುಮಾರಿಗೆಲ್ಲ ಮಾರುಕಟ್ಟೆಗೆ ಬಂದಿದ್ದ ಎಳನೀರು ಖಾಲಿಯಾಗಿದ್ದು ದಿನದ ವ್ಯಾಪಾರವೇ ಮುಗಿದಿದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ. ಎಳನೀರಿನ ಬೆಲೆಯಲ್ಲಿ ಈ ಮಟ್ಟದ ಏರಿಕೆ ಇದೇ ಮೊದಲು ಎನ್ನಲಾಗುತ್ತಿದೆ.