Home ತಾಜಾ ಸುದ್ದಿ ಆರ್‌ಟಿಸಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ..!

ಆರ್‌ಟಿಸಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ..!

0

ರೈತರು ತಮ್ಮ ಜಮೀನಿನ ಪಹಣಿಪತ್ರ (ಆರ್‌ಟಿಸಿ)ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಶೀಘ್ರದಲ್ಲೇ ಕಡ್ಡಾಯವಾಗಲಿದೆ.


ಸರ್ಕಾರದ ಯಾವುದೇ ಸವಲತ್ತು ಪಡೆಯಬೇಕಾದರೆ ರೈತರು ತಮ್ಮ ಆರ್‌ಟಿಸಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕು. ಇದಕ್ಕಾಗಿ ಸರ್ಕಾರ ಹೊಸ ತಂತ್ರಾಂಶವನ್ನು ಸಿದ್ಧಪಡಿಸಿದೆ. ಇದನ್ನು ರೈತರು ತಮ್ಮ ಮೊಬೈಲ್‌ನಿಂದ ಮನೆಯಲ್ಲೇ ಕುಳಿತುಕೊಂಡು ಮಾಡಬಹುದು. ಅಥವಾ ತಮ್ಮ ಗ್ರಾಮ ಲೆಕ್ಕಿಗರ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಆರ್‌ಟಿಸಿಗೆ ಆಧಾರ್‌ ಕಾರ್ಡ್‌ ಲಿಂಕ್ ಮಾಡಲು ನಿರ್ಲಕ್ಷ್ಯ ತೋರಿದರೆ ಅಥವಾ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರ್ಕಾರ ಯಾವುದೇ ಸೌಲಭ್ಯಗಳು ದೊರಕಲು ಸಮಸ್ಯೆ ಉಂಟಾಗಲಿದೆ.

ಸರ್ಕಾರ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಹಾಕಬೇಕು. ಆಗ ಬರುವ OTP ಯನ್ನು ಬಳಸಿ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೊಬೈಲ್‌ಗೆ ಸಂದೇಶಗಳು ಬರುತ್ತವೆ. ಆರ್‌ಟಿಸಿಯನ್ನು ಆಧಾರ್‌ ಕಾರ್ಡ್‌ಗೆ ಲಿಂಕ್ ಮಾಡುವುದರಿಂದ ಜಮೀನಿನ ದಾಖಲೆಗಳು ಸುರಕ್ಷಿತವಾಗಲಿದ್ದು, ಭೂ ದಾಖಲೆಗಳನ್ನು ಪಡೆಯುವುದು ಸುಲಭ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಸರಳವಾಗಲಿದ್ದು, ಖಾತೆಗಳ ವಿವಾದವನ್ನು ತಪ್ಪಿಸಲು ಇದು ಅನುಕೂಲವಾಗಲಿದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪ್ರಕ್ರಿಯೆಯೂ ಸುಲಭವಾಗಲಿದೆ.

ಜಮೀನ ಮಾರಾಟದ ಸಮಯದಲ್ಲಿ ಪಾರದರ್ಶಕತೆ ಉಂಟಾಗಲಿದೆ. ಅಂಡ್ರಾಯ್ಡ್ ಮೊಬೈಲ್ ಇಲ್ಲದವರು ಹಾಗೂ ಲಿಂಕ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ತಮ್ಮ ಊರಿನ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಅಗತ್ಯ ವಿವರವನ್ನು ಪಡೆಯಬಹುದು.

LEAVE A REPLY

Please enter your comment!
Please enter your name here