ಮಂಗಳೂರು: ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ರೂವಾರಿ ಸುಳ್ಯದ ಮುಸ್ತಫಾ ಪೈಚಾರು ಎನ್ಐಎಗೆ ಬಲೆಗೆ ಬಿದ್ದಿರುವುದು ಸಂತೋಷ ತಂದಿದೆ. ಪ್ರಕರಣದ ಹಿಂದಿರುವ ಎಲ್ಲಾ ಆರೋಪಿಗಳ ಬಂಧನವಾಗಬೇಕು. ಎಲ್ಲರಿಗೂ ಮರಣದಂಡನೆ ಆಗಬೇಕು ಎಂದು ಪ್ರವೀಣ್ ನೆಟ್ಟಾರು ಪತ್ನಿ ನೂತನ್ ಆಗ್ರಹಿಸಿದ್ದಾರೆ. ಪ್ರಕರಣದ ಆರೋಪಿಗಳ ಬಂಧನಕ್ಕೆ ಎನ್ಐಎ ಸಂಸ್ಥೆ ಬಹಳಷ್ಟು ಶ್ರಮಪಟ್ಟಿದೆ. ಮುಸ್ತಫಾ ಪೈಚಾರು ಬಂಧನದ ಬೆನ್ನಲ್ಲೇ ಆತನ ಹಿಂದಿರುವ ಎಲ್ಲರ ಬಂಧನವಾಗಲಿದೆ ಎಂಬ ನಂಬಿಕೆ ಇದೆ. ಮತ್ತೆಂದೂ ಇಂತಹ ಪ್ರಕರಣ ನಡೆಯಬಾರದು. ಆ ರೀತಿಯ ಶಿಕ್ಷೆ ದೊರಕಬೇಕು. ಇಂತಹ ಪ್ರಕರಣ ಸಮಾಜದಲ್ಲಿ ಇಲ್ಲಿಗೇ ಕೊನೆಯಾಗಬೇಕು ಎಂದು ನೂತನ್ ಹೇಳಿದರು. ಮುಸ್ತಫಾ ಪೈಚಾರು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಹಾಗೂ ಕೃತ್ಯದ ಪ್ರಮುಖ ರೂವಾರಿ. ಈತ ಕೊಲೆಯ ಬಳಿಕ ತಲೆಮರೆಸಿಕೊಂಡು ಸಕಲೇಶಪುರದ ಆನೆಮಹಲ್ ಗ್ರಾಮದ ಸಿರಾಜ್ ಎಂಬುವರ ಬಳಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಮುಸ್ತಫಾ ಬಂಧನಕ್ಕೆ ಎನ್ಐಎ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇದೀಗ ಆತ ಎನ್ಐಎ ಬಲೆಗೆ ಬಿದ್ದಿದ್ದಾನೆ.
Home ಕರಾವಳಿ ಮಂಗಳೂರು: ನನ್ನ ಗಂಡನ ಹತ್ಯೆ ಮಾಡಿದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡಿ -ಪ್ರವೀಣ್ ನೆಟ್ಟಾರು ಪತ್ನಿಯ...