ಬೆಂಗಳೂರು: ಎಸ್‌ಎಸ್‌ಎಲ್ ಸಿಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಮಾಡಿ, ಮುಹೂರ್ತ ಇಟ್ಟಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು, ಇಷ್ಟು ದಿನ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ.



2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರು ಸೇರಿದ್ದರು. ಈಗ ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶವು ಬಿಡುಗಡೆ ಆಗಲು ಕೆಲವೇ ಗಂಟೆ ಬಾಕಿ ಇದೆ. ಮೇ 09 ರಂದು SSLC ಫಲಿತಾಂಶ ಬಿಡುಗಡೆ ಆಗಲಿದೆ ಎಂದು, ಅಧಿಕೃತ ಘೋಷಣೆ ಮಾಡಲಾಗಿದೆ.


8.69 ಲಕ್ಷ ಸಾಮಾನ್ಯ ವಿದ್ಯಾರ್ಥಿಗಳ ಜೊತೆ 18,225 ಖಾಸಗಿ ವಿದ್ಯಾರ್ಥಿಗಳು & 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.