ಮಂಗಳೂರು: ಐತಿಹಾಸಿಕ, ಲಕ್ಷಾಂತರ ಮಂದಿ ನಂಬುವ ಮೂಲ್ಕಿ ತಾಲೂಕಿನ ಕೊಲ್ಲೂರಿನ ಶ್ರೀ ಕಾಂತಬಾರೆ – ಬೂದಬಾರೆ ಜನ್ಮಕ್ಷೇತ್ರದ ಜೀವಂತ ಸಾಕ್ಷಿಯಾಗಿದ್ದ ತಾಕೊಡೆ ಮರ ಶುಕ್ರವಾರ ನೆಲಕ್ಕುರುಳಿದೆ.ಜೀವಂತ ಸಾಕ್ಷಿಯಾಗಿ ಬೃಹತ್ತಾಗಿ ಬೆಳೆದು ನಿಂತಿದ್ದ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರದ ತಾಕೊಡೆ ಮರ ಶುಕ್ರವಾರ ಬುಡಸಹಿತ ಧರೆಗುರುಳಿದೆ. ಸುಮಾರು 800ರಿಂದ 1,000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢಪಟ್ಟಿತ್ತು. ಇತಿಹಾಸದ ಪ್ರಕಾರ, ಕಾಂತಬಾರೆ-ಬೂದಬಾರೆ ಅವಳಿಗಳು ಮುಲ್ಕಿ ಸಾವಂತ ರಾಜರ ಹೆಸರಾಂತ ಯೋಧ ಲೆಫ್ಟಿನೆಂಟ್‌ಗಳಾಗಿದ್ದರು. ಇನ್ನು ದಂತಕಥೆಯ ಪ್ರಕಾರ, ಅವರು ಈ ಮರದ ಕೆಳಗೆ ಜನಿಸಿದರು ಮತ್ತು ಅವರ ಜನನದ ನಂತರ ಅವರನ್ನು ತಾಕೊಡೆ ಮರದ ಕೊಂಬೆಗೆ ತೊಟ್ಟಿಲು ಕಟ್ಟಿ ತೂಗಲಾಗುತ್ತಿತ್ತು.


