Home ಕರಾವಳಿ ನೊಂದ ಕುಟುಂಬಕ್ಕೆ ಸಹಾಯ ಹಸ್ತ- ವೀರ ಕೇಸರಿ ಬೆಳ್ತಂಗಡಿ ಸಂಘಟನೆಯಿಂದ 64ನೇ ಮಾಸಿಕ ಸೇವಾಯೋಜನೆ ಯಶಸ್ವಿ

ನೊಂದ ಕುಟುಂಬಕ್ಕೆ ಸಹಾಯ ಹಸ್ತ- ವೀರ ಕೇಸರಿ ಬೆಳ್ತಂಗಡಿ ಸಂಘಟನೆಯಿಂದ 64ನೇ ಮಾಸಿಕ ಸೇವಾಯೋಜನೆ ಯಶಸ್ವಿ

0

ಸರ್ವೆಜನಃ‌ ಸುಖಿನೋಭವಂತು
ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ‌ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 7 ವರ್ಷ 11 ತಿಂಗಳುಗಳಲ್ಲಿ 177 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿತು.

ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ #8 ನೇ ವರ್ಷದ ಪಯಣದಲ್ಲಿ 3 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ
ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು ಆಗಮಾತ್ರ ಗೊಂದಲ,ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾದ್ಯ.

ಅಂದು ಅಡಿಗರು ಆಡಿದ ಮಾತು ಕಟ್ಟುವೆವು ನಾವು ಹೊಸದು ನಾಡೊಂದನ್ನ ರಸದ ಬೀಡೊಂದನ್ನ ಬಿಸಿ ನೆತ್ತರು ಉಕ್ಕುಕ್ಕಿ ಹರಿಯುವ ಮುನ್ನ ಕಟ್ಟುವೆವು ನಾವು ಹೊಸದು ನಾಡೊಂದನ್ನು ರಸದ ಬೀಡೊಂದನ್ನು ಎಂಬ ಮಾತಿನಂತೆ ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದಂತ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದ ಸಮರ್ಪಿಸುತ್ತಾ.

174 ನೇ ಸೇವಾಯೋಜನೆ‌ಯಾಗಿ ಮೂಡಬಿದ್ರೆ ತಾಲೂಕಿನ ಪುಚ್ಚಮೊಗರು ಗ್ರಾಮದ ರಾಂಬೈಲು ನಿವಾಸಿ ರಮೇಶ್ ಇವರ ಪತ್ನಿ ಸುಮಿತ್ರ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮುಂದಿನ ಚಿಕಿತ್ಸಾ ವೆಚ್ಚಕ್ಕಾಗಿ 15,000 ರೂಗಳನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

176ನೇ ಸೇವಾಯೋಜನೆ‌ಯಾಗಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಾಫಿನಡ್ಕ ಗಾಂಧಿನಗರ ನಿವಾಸಿ ಡೀಕಮ್ಮ ಇವರ ಮಗಳ ಎದೆಯ ಭಾಗದಲ್ಲಿ ಗೆಡ್ಡೆ ಬೆಳೆದಿದ್ದು ಇದರ ಶಸ್ತ್ರಚಿಕಿತ್ಸಾ ವೆಚ್ಚಕ್ಕಾಗಿ 15,000 ರೂಗಳನ್ನು ಹಸ್ತಾಂತರಿಸಲಾಯಿತು.

177ನೇ ಸೇವಾಯೋಜನೆ‌ಯಾಗಿ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಬೊಳ್ಳಾರಿ ಮನೆ ನಿವಾಸಿ ಮೋನಿಷಾ ಮೋಹನ್ ಇವರ ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುತಿದ್ದು ಇವರ ಶೈಕ್ಷಣಿಕ ವೆಚ್ಚಕ್ಕಾಗಿ 15,000 ರೂಗಳನ್ನು ಹಸ್ತಾಂತರಿಸಲಾಯಿತು

LEAVE A REPLY

Please enter your comment!
Please enter your name here