Home ಕ್ರೈಂ ನ್ಯೂಸ್ ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ-ಪತ್ನಿಗೆ ಮೆಸೇಜ್ ಮಾಡಿದ ಮುಸ್ಲಿಂ ಯುವಕನ...

ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ-ಪತ್ನಿಗೆ ಮೆಸೇಜ್ ಮಾಡಿದ ಮುಸ್ಲಿಂ ಯುವಕನ ಬರ್ಬರ ಹತ್ಯೆ..!

0

ರಾಯಚೂರು : ಪತ್ನಿಗೆ ಮೆಸೇಜ್ ಮಾಡಿದ ಕಾರಣಕ್ಕೆ ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ ಆ ಯುವಕನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ರಾಯಚೂರಿನ ತುಗ್ಗಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಖಾದರ್ ಭಾಷಾ (28) ಕೊಲೆಯಾದ ವ್ಯಕ್ತಿ. ಮಾರುತಿ ಹತ್ಯೆಗೈದ ಪೂಜಾರಿ. ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳು. ಆದರೆ, ಖಾದರ್ ಭಾಷಾ ಮಾರುತಿ ಪತ್ನಿ‌ ಮೇಲೆ ಕಣ್ಣು ಹಾಕಿದ್ದಾನೆ. ಹೀಗಾಗಿ ಮಾರುತಿ, ಖಾದರ್‌ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಭೀಭತ್ಸವಾಗಿ ಹತ್ಯೆ ಮಾಡಿದ್ದಾನೆ.

ಕೊಲೆಗೈದ ಮಾರುತಿ ಖುದ್ದಾಗಿ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕೊಲೆಯಲ್ಲಿ ಇತರರೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here