ಮತದಾನವು ನಮ್ಮ ಮೂಲಭೂತ ಹಕ್ಕು ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಜವಾಬ್ದಾರಿಯಾಗಿದೆ. ಇದಕ್ಕಾಗಿ ವೋಟರ್ ಐಡಿ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾಕೆಂದರೆ ಅದನ್ನು ಹೊಂದಿರುವವರ ಗುರುತು ಮತ್ತು ವಿವರಗಳನ್ನು ಪರಿಶೀಲಿಸಲು ಸಹಕಾರಿಯಾಗುತ್ತದೆ.
ಯಾರು ಅರ್ಹರು?
ಭಾರತದ ಚುನಾವಣಾ ಆಯೋಗದ ಪ್ರಕಾರ ನಾಗರಿಕರು ಈ ಕೆಳಗಿನ ಷರತ್ತುಗಳ ಅಡಿಯಲ್ಲಿ ಮತದಾರರಾಗಲು ಅರ್ಹರಾಗಿರುತ್ತಾರೆ. 18 ವರ್ಷ ವಯಸ್ಸಿನ ಪ್ರತಿಯೊಬ್ಬ ನಾಗರಿಕರು ಯಾವುದಾದರೂ ನಿರ್ಧಿಷ್ಟ ಕಾರಣದಿಂದ ಅನರ್ಹಗೊಳಿಸದ ಹೊರತು ಮತದಾರರ ಗುರುತು ಚೀಟಿ ಪಡೆಯಲು ದಾಖಲಾತಿ ನಡೆಸಲು ಅರ್ಹರಾಗಿರುತ್ತಾರೆ.
ಅರ್ಹ ಮತದಾರನ ಸಾಮಾನ್ಯ ನಿವಾಸದ ಸ್ಥಳದಲ್ಲಿ ಮಾತ್ರ ನೋಂದಣಿ ಮಾಡಿಸಬಹುದು ಹಾಗೂ ಒಂದೇ ಸ್ಥಳದಲ್ಲಿ ಮಾತ್ರ ನೋಂದಣಿ ಸಾಧ್ಯ.ಸಾಗರೋತ್ತರ ಭಾರತೀಯರ ಪಾಸ್‌ಪೋರ್ಟ್‌ನಲ್ಲಿ ನೀಡಿರುವ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮತದಾರರು ತಮ್ಮ ಮನೆಯ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಾರೆ ಎಂದು ಪರಿಗಣಿಸಲಾಗುವುದು.
ವೋಟರ್ ಐಡಿ ಇಲ್ಲದೆ ಮತ ಚಲಾಯಿಸಬಹುದೇ?
ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಅಗತ್ಯವಿದೆ. ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಯಾವುದೇ ಒಂದು ದಾಖಲೆಯನ್ನು ಒದಗಿಸಬೇಕು.
ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿದ ಸೂಚನೆಗಳ ಪ್ರಕಾರ ಮತದಾರರ ಗುರುತಿನ ಚೀಟಿ ಇಲ್ಲದೆಯೂ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರೆಗೆ ಮತ ಚಲಾಯಿಸಲು ಮತದಾರರು ಅರ್ಹನಾಗಿರುತ್ತಾರೆ.
ನೋಂದಣಿ ಸ್ಥಿತಿ ಪರಿಶೀಲನೆ ಹೇಗೆ?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಮಾತ್ರ ಮತ ಚಲಾಯಿಸಬಹುದು. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ https://electoralsearch.eci.gov.in ಗೆ ಲಾಗಿನ್ ಆಗಿ ನೋಡಬಹುದು. ಅಲ್ಲದೇ ಮತದಾರರ ಸಹಾಯವಾಣಿ 1950ಕ್ಕೆ ಕರೆಯೂ ಪರಿಶೀಲನೆ ನಡೆಸಬಹುದಾಗಿದೆ.