Home ತಾಜಾ ಸುದ್ದಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿಷವುಣಿಸಿ ಕೊಂದ ತಾಯಿ

ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿಷವುಣಿಸಿ ಕೊಂದ ತಾಯಿ

0

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಅವಳಿ ಜವಳಿ ಮಕ್ಕಳ ಅನುಮಾನಾಸ್ಪದ ಸಾವಿಗೇ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಾಯಿ ಮಕ್ಕಳಿಗೆ ವಿಷವುಣಿಸಿ ಕೊಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ.


ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು ಎಂದು ಹೇಳಲಾಗಿತ್ತು.ಬೀದಿ ಬದಿ ಮಾರಾಟಕ್ಕಿದ್ದ ಐಸ್‌ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು ಮೃತಪಟ್ಟಿದ್ದು ತಾಯಿ ಅಸ್ವಸ್ಥಗೊಂಡಿರುವ ಘಟನೆ ನಡೆದಿತ್ತು.

ಆದರೆ ಪೊಲೀಸರ ವಿಚಾರಣೆಯ ವೇಳೆ ತಾಯಿ ಪೂಜಾ ನಾನೇ ವಿಷಯವುಣಿಸಿ ಕೊಂದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.

ಪೊಲೀಸರ ವಿಚಾರಣೆ ವೇಳೆ ತಾಯಿ ಪೂಜಾ ಇದೀಗ ತಪ್ಪು ಒಪ್ಪಿಕೊಂಡಿದ್ದು, ಆಸ್ಪತ್ರೆಯಲ್ಲಿ ಬೆಳಗ್ಗೆ ಒಂದುವರೆ ವರ್ಷದ ತ್ರಿಶೂಲ್ ಹಾಗೂ ತ್ರಿಶಾ ಸಾವನ್ನಪ್ಪಿದ್ದರು.ಐಸ್ ಕ್ರೀಮ್ ತಿಂದ ಬಳಿಕ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರ ವಿಚಾರಣೆ ವೇಳೆ ಪೂಜಾ ಮಕ್ಕಳಿಗೆ ವಿಷ ಉಣಿಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.

ತನ್ನ ಮೂರು ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಾನು ಸೇವಿಸಿದ್ದಳು. ಅಸಸ್ಥಗೊಂಡ ತಾಯಿ ಮಕ್ಕಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರು ಕಂದಮ್ಮಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದವು. ತಾಯಿ ಪೂಜ ಹಾಗೂ ಮೊದಲ ಮಗಳು ಬೃಂದಾಗೆ ಇದೀಗ ಚಿಕಿತ್ಸೆ ಮುಂದುವರೆದಿದೆ.ಇದೀಗ ತಾಯಿ ಪೂಜಾ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here