Home ತಾಜಾ ಸುದ್ದಿ ‘ರಾಮೇಶ್ವರಂ ಕೆಫೆ’ ಬದಲು ಐಟಿ ಕಂಪನಿ ಸ್ಪೋಟಿಸಲು ಸ್ಕೆಚ್ ಹಾಕಿದ್ದ ಉಗ್ರರು ; ಸ್ಪೋಟಕ ಮಾಹಿತಿ...

‘ರಾಮೇಶ್ವರಂ ಕೆಫೆ’ ಬದಲು ಐಟಿ ಕಂಪನಿ ಸ್ಪೋಟಿಸಲು ಸ್ಕೆಚ್ ಹಾಕಿದ್ದ ಉಗ್ರರು ; ಸ್ಪೋಟಕ ಮಾಹಿತಿ ಬಯಲು

0

ಬೆಂಗಳೂರು : ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇದೀಗ ಪ್ರಕರಣ ಸಂಬಂಧ ಎನ್ ಐ ಎ ತನಿಖೆಯಲ್ಲಿ ಸ್ಪೋಟಕ ಮಾಹಿತಿಯೊಂದು ಬಯಲಾಗಿದೆ.

ಆರೋಪಿಗಳು ಐಟಿ ಪಾರ್ಕ್ ಗಳಲ್ಲಿ ಸ್ಪೋಟಿಸಲು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಐಟಿ ಪಾರ್ಕ್ ಗಳನ್ನು ಟಾರ್ಗೆಟ್ ಮಾಡಿದ್ದ ಆರೋಪಿಗಳು ದೊಡ್ಡ ಸಾಫ್ಟ್ ವೇರ್ ಕಂಪನಿಯನ್ನು ಸ್ಪೋಟಿಸಲು ಸ್ಕೆಚ್ ಹಾಕಿದ್ದರು.

ಯಾವುದಾದರೂ ದೊಡ್ಡ ಐಟಿ ಕಂಪನಿಗಳನ್ನು ಸ್ಪೋಟಿಸಿದ್ರೆ ವಿದೇಶಿ ಬಂಡವಾಳಕ್ಕೆ ಪೆಟ್ಟು ಕೊಡಬಹುದು, ಇದರಿಂದ ಭಾರತದ ಆರ್ಥಿಕತೆ ಹಾಳಾಗುತ್ತದೆ ಎಂದು ಸ್ಕೆಚ್ ಹಾಕಿದ್ದರು.

LEAVE A REPLY

Please enter your comment!
Please enter your name here