ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸೋಮವಾರ ದಿನವಿಡೀ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ದೇವಸ್ಥಾನ, ಮಂದಿರ, ಸಮುದಾಯ ಭವನಗಳಿಗೆ ತೆರಳಿ ಮತದಾರರನ್ನು ನೇರವಾಗಿ ಭೇಟಿಯಾಗುವ ಮೂಲಕ ಮತ ಯಾಚಿಸಿದ್ದಾರೆ.
ಬೆಳಗ್ಗೆ ಕುಡುಪು ದೇವಸ್ಥಾನ, ನಾಗಬನಕ್ಕೆ ತೆರಳಿ ಪ್ರಾರ್ಥನೆ ನೆರವೇರಿಸಿ ದಿನದ ಕಾರ್ಯಕ್ರಮ ಆರಂಭಿಸಿದ ಕ್ಯಾ.ಚೌಟ, ಬಳಿಕ ವಾಮಂಜೂರಿನ ಅಮೃತೇಶ್ವರ ದೇವಸ್ಥಾನ, ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ ಗುರುನಗರ, ವಜ್ರದೇಹಿ ಮಠ ಗುರುಪುರ, ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಶ್ರೀ ಕ್ಷೇತ್ರಕ್ಕೆ ಭೇಟಿಯಿತ್ತು ಅಲ್ಲಿ ನೆರೆದಿದ್ದ ಜನರಲ್ಲಿ ಮತ ಯಾಚನೆ ಮಾಡಿದ್ದಾರೆ.
ಗುರುಪುರ ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿರ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಮಳಲಿ, ಬಿಲ್ಲವ ಅಂಚನ್ ಕುಟುಂಬಸ್ಥರ ತರವಾಡು ಮಠ, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ, ಬಿಲ್ಲವ ಸಮಾಜಸೇವಾ ಸಂಘ, ಕಂದಾವರ-ಗುರುನಗರ, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ, ಬಿಲ್ಲವ ಸಮಾಜಸೇವಾ ಸಂಘ ಅದ್ಯಪಾಡಿ, ಶ್ರೀ ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ, ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರ, ಗುರುನಗರ ಕೋಡಿಕಲ್, ಶ್ರೀ ಶ್ರೀಕುರು ಅಂಬಾ ರಾಜೇಶ್ವರೀ ಸುಬ್ರಮಣ್ಯ ದೇವಸ್ಥಾನ, ಕಲ್ಬಾವಿ ಬನ, ದೇರೆಬೈಲು ಇಲ್ಲಿಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದ್ದಾರೆ.
ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ, ಕಾಳಿಕಾಂಬ ದೇವಸ್ಥಾನ ಕುಳಾಯಿ, ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ, ಗಣೇಶಪುರ-ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ಮಾಡಿದ್ದು ದೇವರ ದರ್ಶನ ಮಾಡಿ ಅಲ್ಲಿ ಸೇರಿದ್ದ ಜನರಲ್ಲಿ ದೇಶಕ್ಕಾಗಿ ಮೋದಿ ಪರವಾಗಿ ಮತ ನೀಡುವಂತೆ ಕೇಳಿಕೊಂಡಿದ್ದಾರೆ.