Home ತಾಜಾ ಸುದ್ದಿ ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ನೇಣಿಗೆ ಶರಣು..!

ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ನೇಣಿಗೆ ಶರಣು..!

0

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಮತ್ತು ಜರಟ್ ಲ್ಯಾಗ್ ಪಬ್ ಮಾಲೀಕ ಸೌಂದರ್ಯ ಜಗದೀಶ್ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣಿನ ಕುಣಿಯಲ್ಲಿ ನೇತಾಡುತ್ತಿದ್ದ ಜಗದೀಶರನ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿತ್ತು.‌ ಆದ್ರೆ ಆಸ್ಪತ್ರೆ ಸೇರಿಸೋ‌ ಮೊದಲೆ ಜಗದೀಶ್ ಉಸಿರು ಚೆಲ್ಲಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಲಬ್ ರಸ್ತೆಯಲ್ಲಿರೋ ನಿವಾಸದಲ್ಲಿ ಸೌಂದರ್ಯ ಜಗದೀಶ್ ಸೂಸೈಡ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ಸೌಂದರ್ಯ ಜಗದೀಶ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ರು ಎಂದು ಹೇಳಲಾಗ್ತಿದೆ. ಅಪ್ಪು ಪಪ್ಪು ಸಿನಿಮಾದಲ್ಲಿ ತಮ್ಮ ಮಗನನ್ನೇ ಪರಿಚಯಿಸಿದ್ದ ಸೌಂದರ್ಯ ಜಗದೀಶ್ ರಾಮ್ ಲೀಲಾ, ಸ್ನೇಹಿತರು ಸಿನಿಮಾಗಳನ್ನ ನಿರ್ಮಾಣ ಮಾಡಿದ್ರು. ಇನ್ನೂ ಕಳೆದ ತಿಂಗಳು ಜಗದೀಶ್ ಬಾಡಿಗಾರ್ಡ್ ಸಾವನ್ನಿಪ್ಪಿದ್ರೆ. ಎರಡು ವಾರದ ಹಿಂದಷ್ಟೇ ಜಗದೀಶ್ ಅತ್ತೆ ಸಾವನ್ನಪ್ಪಿದ್ರು. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

LEAVE A REPLY

Please enter your comment!
Please enter your name here