Home ತಾಜಾ ಸುದ್ದಿ ಇಸ್ರೇಲ್‌ ನಡೆಸಿದ ಏರ್ ಸ್ಟ್ರೈಕ್ ದಾಳಿಗೆ ಹಮಾಸ್ ಮುಖ್ಯಸ್ಥನ 3 ಮಕ್ಕಳು, 2 ಮೊಮ್ಮಕ್ಕಳು ಹತ್ಯೆ

ಇಸ್ರೇಲ್‌ ನಡೆಸಿದ ಏರ್ ಸ್ಟ್ರೈಕ್ ದಾಳಿಗೆ ಹಮಾಸ್ ಮುಖ್ಯಸ್ಥನ 3 ಮಕ್ಕಳು, 2 ಮೊಮ್ಮಕ್ಕಳು ಹತ್ಯೆ

0

ಜೆರುಸಲೇಂ: ಹಮಾಸ್ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ನ ಮೂವರು ಮಕ್ಕಳನ್ನು ಗಾಜಾದಲ್ಲಿ ನಡೆದ  ಏರ್ ಸ್ಟ್ರೈಕ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇ ಲ್ ರಕ್ಷಣಾ ಪಡೆ ತಿಳಿಸಿದೆ.

ಬುಧವಾರ ನಡೆದ  ಏರ್ ಸ್ಟ್ರೈಕ್ ನಲ್ಲಿ  ಹಮಾಸ್ ಮಿಲಿಟರಿ ವಿಭಾಗದ ಹೆಸರಾಂತ ಸೆಲ್ ಕಮಾಂಡರ್ ಅಮೀರ್ ಹನಿಯೆಹ್ ಮತ್ತು ಸಹೋದರರಾದ ಮೊಹಮ್ಮದ್ ಮತ್ತು ಹಜೆಮ್ ಹನಿಯೆಹ್ ಹತ್ಯೆಯಾಗಿದ್ದಾರೆ.

ಐಎಎಫ್ ವಿಮಾನವು ಇಂದು ಸೆಂಟ್ರಲ್ ಗಾಜಾದಲ್ಲಿ ಹಮಾಸ್ ಮಿಲಿಟರಿ ವಿಭಾಗದಲ್ಲಿ ಸೆಲ್ ಕಮಾಂಡರ್ ಅಮೀರ್ ಹನಿಯೆಹ್ ಮತ್ತು ಮೊಹಮ್ಮದ್ ಮತ್ತು ಹಜೆಮ್ ಹನಿಯೆಹ್ ರನ್ನು ಮೇಲೆ ದಾಲಿ ನಡೆಸಿ ಹತ್ಯೆ ಮಾಡಿದೆ. . ಮೂವರು ಹಮಾಸ್ ರಾಜಕೀಯ ಬ್ಯೂರೋ ಅಧ್ಯಕ್ಷ ಇಸ್ಮಾ ಯಿಲ್ ಹನಿಯೆಹ್ ಅವರ ಪುತ್ರರು ಎಂದು ಐಡಿಎಫ್ ಖಚಿತಪಡಿಸಿದೆ. ಎಂದು ಐಡಿಎಫ್ ತನ್ನ ಅಧಿಕೃತ ಎಕ್ಸ್ ಹ್ಯಾಂ ಡಲ್ ನಲ್ಲಿ ಪೋಸ್ಟ್ ಮಾಡಿದೆ.

ಶತಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ಏರ್ ಸ್ಟ್ರೈ ಕ್ ಅವರ ನಾಲ್ಕು ಮೊಮ್ಮಕ್ಕಳ ಪ್ರಾಣವನ್ನು ಬಲಿತೆಗೆದುಕೊಂಡಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here