ಬೆಂಗಳೂರು: ಜಿ ಆರ್ ಸಿ ಪ್ರೊಡಕ್ಷನ್ಸ್ ನಿರ್ಮಾಣದ ಎಚ್.ಕೆ ವಾಮನ್ ಸಂಜು ನಿರ್ದೇಶನದ “ಕೇಳದೆ ನಿಮಗೀಗ” ಕನ್ನಡ ಕಿರುಚಿತ್ರದ ಪ್ರೀಮಿಯರ್ ಶೋ ಹಾಗೂ ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಸುಚಿತ್ರಾ ಸಿನಿಮಾ ಹಾಗೂ ಸಾಂಸ್ಕೃತಿಕ ಅಕಾಡೆಮಿಯಲ್ಲಿ ಮಾರ್ಚ್ 31 ರಂದು ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರನಟ ಪೃಥ್ವಿ ಅಂಬರ್, ಶ್ರೀ ಚಂದ್ರಹಾಸ್, ಶ್ರೀ ಟಿ ತಿಮ್ಮೇಶ್, ಎಂ ಲಕ್ಷ್ಮಣ್, ಅರಕಲಗೂಡು ಜಯಕುಮಾರ್, ಜೀವನ್ಮುಖಿ ಸುರೇಶ್, ಡಾ.ವಿಶ್ವನಾಥ್ ಜಿ. ಪಿ, ರೋಶನ್,ಅಶೀಫ್, ಶ್ರೀಮತಿ ಶಾರದಾ ಸಿಂಗ್ ಹಾಗೂ ಮುಂತಾದವರು ಭಾಗವಿಸಿದ್ದರು.
“ಕೇಳದೆ ನಿಮಗೀಗ” ಕಿರುಚಿತ್ರವು ಆನಂದ್ ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದ್ದು ನಾಯಕನ ಪಾತ್ರದಲ್ಲಿ ಕರಾವಳಿಯ ಉದಯೋನ್ಮುಖ ಪ್ರತಿಭೆ ವಿಂಕ್ರಾತ್ ಮಂದಾರಬೈಲ್ ನಟಿಸಿದ್ದು ನಾಯಕಿಯರಾಗಿ ಪೂರ್ಣಿಮಾ ಗೌಡ ಹಾಗೂ ಹೊನ್ನಾಂಬಿಕ ಬಣ್ಣ ಹಚ್ಚಿದ್ದಾರೆ.
ಉಳಿದಂತೆ ತಾಂತ್ರಿಕ ತಂಡದಲ್ಲಿ ಛಾಯಾಗ್ರಹಣದಲ್ಲಿ ಕಿಶೋರ್ ಎಸ್ ಅಂಚನ್, ಸಂಕಲನ ರಾಜೇಶ್ ಚೌಹಾಣ್,ಸಂಗೀತ ಎ. ಟಿ ರವೀಶ್, ಡಿ.ಐ ಕಿಶೋರ್ ಕುಮಾರ್ ಅಕ್ಕಣ , ಕಲೆ ಅನಿಲ್, ಪ್ರಸಾದನ ಮುಜುಬುಲ್ಲ, ವಿ ಎಫ್ ಎಕ್ಸ್ ಶಿವ ಕುಮಾರ್ .ಕೆ, ಸಹಾಯಕ ನಿರ್ದೇಶನ ಕಾರ್ತಿಕ ಹಾಗೂ ಬಿಂದುರಾಜ್, ಪ್ರಚಾರ ಕಲೆ ಬ್ರಹ್ಮ ಪಾಟೀಲ್ ಕಾರ್ಯ ನಿರ್ವಹಿಸಿದ್ದಾರೆ.
ಕಿರುಚಿತ್ರವು ಮಂಗಳೂರು ಸೇರಿದಂತೆ ಕರಾವಳಿಯ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದ್ದು ತಾಂತ್ರಿಕವಾಗಿ ಉತ್ತಮ ಗುಣಮಟ್ಟದಲ್ಲಿ ಮೂಡಿಬಂದಿದೆ.