ಪುತ್ತೂರು: ಕೇರಳ ರಾಜ್ಯ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಪಡ್ನೂರು ನಿವಾಸಿ ಲಕ್ಷ್ಮಣ ಎಂದು ಗುರುತಿಸಲಾಗಿದೆ. ಆರೋಪಿ ಎ. 1ರಂದು ಮಧ್ಯಾಹ್ನ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಪಾನ್ ಬೀಡ ಅಂಗಡಿಯಲ್ಲಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ನಂದಕುಮಾರ್‌ಎಂ.ಎಂ. ಹಾಗೂ ಸಿಬಂದಿ ಲಕ್ಷ್ಮಣನನ್ನು ವಿಚಾರಿಸಿ 1,550 ಮೌಲ್ಯದ 31 ಲಾಟರಿ ಹಾಗೂ ಮಾರಾಟ ಮಾಡಿದ ಹಣ 1,100 ರೂ. ವಶಪಡಿಸಿಕೊಂಡಿದ್ದಾರೆ.