ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕಪಿಲಾ ನದಿಯ ದಡದಲ್ಲಿರುವ ಶಿಶಿಲೇಶ್ವರ ದೇವಸ್ಥಾನವಿದೆ. ಈ ಪ್ರಸಿದ್ಧ ದೇವಾಲಯವನ್ನು ಅಲ್ಲಿನ ಮೀನು ದೇವತೆಯಿಂದಾಗಿ ಮತ್ಸ್ಯ ತೀರ್ಥ ಕ್ಷೇತ್ರ ಎಂದೂ ಕರೆಯಲಾಗುತ್ತದೆ.
ಈ ಸ್ಥಳದ ವಿಶೇಷವೆಂದರೆ ಇಲ್ಲಿಗೆ ಭೇಟಿ ನೀಡುವ ಭಕ್ತರು ಕಪಿಲಾ ನದಿಯಲ್ಲಿನ ಮೀನುಗಳಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಅವುಗಳಿಗೆ ಅರಳು , ಆಹಾರಗಳನ್ನು ಅರ್ಪಿಸುತ್ತಾರೆ.
ವರದಿಗಳ ಪ್ರಕಾರ, ಕಪಿಲಾ ನದಿ ಒಣಗುತ್ತಿದೆ. ಈ ಕಾರಣದಿಂದಾಗಿ, ದೇವಾಲಯದ ಆಡಳಿತವು ಮೀನುಗಳಿಗೆ ಅರಳು ಅರ್ಪಿಸುವುದನ್ನು ನಿಷೇಧಿಸಿದೆ. ನದಿಯಲ್ಲಿ ನೀರಿನ ಮಟ್ಟವೂ ಕುಸಿದಿದೆ. ಮೀನುಗಳಿಗೆ ಅತಿಯಾದ ಆಹಾರ ನೀಡುವುದರಿಂದ, ನೀರು ಕಲುಷಿತಗೊಂಡಿದೆ ಮತ್ತು ಪ್ರಾಣಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ.
ಇದನ್ನು ಮನಗಂಡ ದೇವಾಲಯದ ಆಡಳಿತ ಮಂಡಳಿಯು ಭಕ್ತರು ಮೀನುಗಳಿಗೆ ಆಹಾರಗಳನ್ನು ಅರ್ಪಿಸುವುದನ್ನು ನಿಷೇಧಿಸಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಾಗೂ ನೀರು ಕಲುಷಿತವಾಗುವ ಸಾಧ್ಯತೆಯಿರುವ ಹಿನ್ನೆಲೆ ಮೀನಿಗೆ ಅರುಳು ಹಾಕುವುದು ನಿಷೇಧ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಂಡುಬರುವ ರಾಸಾಯನಿಕಯುಕ್ತ ವಸ್ತುಗಳಲ್ಲಿ ಅರಳು ಕೂಡ ಸೇರಿಕೊಂಡಿದೆ. ಅರಳು ಸೇರಿದಂತೆ ಯಾವುದೇ ತಿಂಡಿಯನ್ನು ಹಾಕಬಾರದು ಎಂದು ಭಕ್ತರಿಗೆ ಸೂಚನೆ ನೀಡಲಾಗಿದೆ.