ಉಡುಪಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ 9 ಮಂದಿ ರೌಡಿಶೀಟರ್ ಗಳ ಗಡಿಪಾರಿಗೆ ಆದೇಶ ಹೊರಡಿಸಲಾಗಿದೆ.



ಉಡುಪಿ ಉಪವಿಭಾಗಧಿಕಾರಿ ರಶ್ಮಿ ಅವರು ಗಡಿಪಾರು ಆದೇಶ ಮಾಡಿದ್ದಾರೆ. ಇವರೆಲ್ಲ ಉಡುಪಿಯ ನಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಗಳಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ರಾಘವೇಂದ್ರ ದೇವಾಡಿಗ,ಅಭಿಷೇಕ್ ಶ್ರೀಯಾನ್ ಕಾಪು,ರಂಜಿತ್ ಪೂಜಾರಿ,ಮಹೇಶ್ ಗಾಣಿಗ, ಹರೀಶ್ ಪೂಜಾರಿ ಮಣಿಪಾಲ, ರಂಜಿತ್ ಯಾನೆ ರಂಜಿತ್ ಕಲ್ಮಾಡಿ,ಇಕ್ಬಾಲ್ ಮಣಿಪಾಲ,ರೋಹಿತ್ ಕೋಟ,ಮೊಹಮ್ಮದ್ ರಶೀದ್- ಗಡಿಪಾರಾದ ರೌಡಿಶೀಟರ್ ಗಳಾಗಿದ್ದಾರೆ.ಜೂನ್ 10 ರವರೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

