Home ಕರಾವಳಿ ಪದ್ಮನಾಭ ಸಾಮಂತ್ ಸಾವು: ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲು ರಮಾನಾಥ ರೈ ದ.ಕ ಜಿಲ್ಲಾ...

ಪದ್ಮನಾಭ ಸಾಮಂತ್ ಸಾವು: ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲು ರಮಾನಾಥ ರೈ ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಮನವಿ

0

ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಹಾಗೂ ಕಾಂಗ್ರೆಸ್ ಮುಖಂಡರಿಂದ ಭೇಟಿ ಇತ್ತೀಚೆಗೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ದಕ್ಷಿಣ ಕನ್ನಡ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಶ್ರೀ ಪದ್ಮನಾಭ ಸಾಮಂತ್ ರವರ ಮೃತ ದೇಹ ದಿನಾಂಕ 31-03-2024 ರಂದು ಅವರ ಮನೆಯ ಸ್ವಲ್ಪ ದೂರದಲ್ಲಿನ ನಿರ್ಜನ ಗುಡ್ಡ ಪ್ರದೇಶದಲ್ಲಿನ ಮರದ ತುದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಪದ್ಮನಾಭ ಸಾಮಂತ್‌ರವರು ಒಬ್ಬ RTI ಕಾರ್ಯಕರ್ತನಾಗಿದ್ದು, ಬಂಟ್ವಾಳ ತಾಲೂಕಿನಲ್ಲಿನ ಹಲವಾರು ಭ್ರಷ್ಟಚಾರ ಹಗರಣಗಳನ್ನು ಬಯಲಿಗೆಳಂತಹ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು. ಬಂಟ್ವಾಳ ಅಕ್ರಮ ಸಕ್ರಮ ಸಮಿತಿ 2019 ರಿಂದ 2023 ರವರೆಗಿನ ನಡೆಸಿದಂತಹ ಅಕ್ರಮ-ಸಕ್ರಮ ಭೂಮಂಜೂರಾತಿಗೆ ಸಂಬಂಧಪಟ್ಟಂತೆ ಸಮಿತಿಯು ನಡೆಸಿದಂತಹ ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಿ ದೂರು ದಾಖಲಿಸಿದ್ದರು.ಬಂಟ್ವಾಳ ಕ್ಷೇತ್ರದ ಶಾಸಕರ ಹಿಂಬಾಲಕರೊಬ್ಬರು ಬಂಟ್ವಾಳ ಬೈಪಾಸ್‌ನಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡದ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯವರ ವಿರುದ್ದ ಕ್ರಮಕೈಗೊಳ್ಳುವಂತೆ ದೂರು ನೀಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಬಂಟ್ವಾಳ ಕ್ಷೇತ್ರದ ಹಲವಾರು ಕಡೆಗಳಲ್ಲಿ ಕಳಪೆ ರಸ್ತೆ ಡಾಮಾರೀಕರಣ/ಕಾಂಕ್ರೀಟಿಕರಣ ಬಗ್ಗೆ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ದೂರನ್ನು ಸಲ್ಲಿಸಿದ್ದರು. ಸಿದ್ದಕಟ್ಟೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರ ಬ್ಯಾಂಕ್ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಪ್ರಶ್ನೆಯನ್ನು ಮಾಡಿದ್ದರು.ಹೀಗೆ ತಾಲೂಕಿನಾಧ್ಯಂತ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಪ್ರಶ್ನೆಯನ್ನು ಮಾಡುತ್ತಾ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದರು.


ಹೀಗಿರುವಲ್ಲಿ ಪದ್ಮನಾಭ ಸಾಮಂತ್‌ರವರು ಒಬ್ಬ ಧೃಡ ಮನಸ್ಸಿನ ವ್ಯಕ್ತಿಯಾಗಿದ್ದು, ಯಾವುದೇ ರೀತಿಯಲ್ಲಿ ಆತ್ಮಹತ್ಯೆ ಮಾಡತಕ್ಕಂತಹ ದುರ್ಬಲ ಮನಸ್ಸಿನ ವ್ಯಕ್ತಿಯಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ವಿಚಾರವಾಗಿರುತ್ತದೆ. ಆದರೆ ಅವರ ಸಾವಿನ ರೀತಿ ಮತ್ತು ಮೃತದೇಹ ಇದ್ದಂತಹ ಸ್ಥಿತಿಗತಿ ಅವರ ಸಾವಿನ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುತ್ತಾ ಇದೆ. ಅವರು ಕೆಲವೊಂದು ರಾಜಕೀಯ ಪ್ರಭಾವಿ ವ್ಯಕ್ತಿಗಳ ವಿರುದ್ದ ಮತ್ತು ಅವರ ಅಕ್ರಮಗಳ ವಿರುದ್ದ ಯಾವುದೇ ಮುಲಾಜಿಲ್ಲದೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸುತ್ತಾ ಇದ್ದರು.ಆ ಕಾರಣಕ್ಕಾಗಿ ಪದ್ಮನಾಭ ಸಾಮಂತ್‌ರವರಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಬಾಬ್ತು ಪೋಲಿಸ್ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿ ಸೂಕ್ತ ರಕ್ಷಣೆಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದುದರಿಂದ ಈ ಎಲ್ಲಾ ಸನ್ನಿವೇಶಗಳು ಪದ್ಮನಾಭ ಸಾಮಂತ್‌ರವರ ಸಾವಿನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದು, ರಾಜಕೀಯ ವಲಯದಲ್ಲಿ ಕೂಡ ಅವರ ಮೇಲೆ ವೈಯಕ್ತಿಕ ದ್ವೇಷವನ್ನು ಹೊಂದಿದ್ದ ವ್ಯಕ್ತಿಗಳು ಅವರ ಸಾವಿನ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ, ಅಪಮಾನಕಾರಕವಾಗಿ, ನಿಂದನಕಾರಿಯಾಗಿ ಮತ್ತು ಅಪಹಾಸ್ಯದ ಸುದ್ದಿಗಳನ್ನು ಪದ್ಮನಾಭ ಸಾಮಂತ್‌ರವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದರು. ಈ ಎಲ್ಲಾ ವ್ಯಕ್ತಿಗಳ ಬಗ್ಗೆ ಸೂಕ್ತ ರೀತಿಯ ತನಿಖೆಯ ಅಗತ್ಯವಿರುತ್ತದೆ .

ಆದುದರಿಂದ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಪದ್ಮನಾಭ ಸಾಮಂತ್‌ರವರ ಸಾವು ಹೇಗೆ ಸಂಬವಿಸಿತೆಂದು ಹಾಗೂ ಅದರ ಹಿಂದಿನ ಕಾರಣವನ್ನು ಕಂಡು ಹಿಡಿಯಲು ಸೂಕ್ತ ತನಿಖೆಯನ್ನು ಕೈಗೊಳ್ಳಬೇಕು, ಈ ಕಾರಣಕ್ಕಾಗಿ ಪ್ರತ್ಯೇಕ ವಿಶೇಷ ಪೋಲಿಸ್ ತಂಡವನ್ನು ರಚಿಸಿ ತನಿಖೆ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುವುದಾಗಿದೆ ಒಂದಾನುವೇಳೆ ಆತ್ಮಹತ್ಯೆಯ ಸಂದರ್ಭಗಳೇನಾದರೂ ತನಿಖೆಯಲ್ಲಿ ಕಂಡುಬಂದಲ್ಲಿ, ಇದಕ್ಕೆ ಪ್ರಚೋದನೆಗೈದು ಘಟನೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ದ ಕೂಡಲೇ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವರಿಗೆ ವಿನಂತಿಸಿದರು.

ಈ ಸಂದರ್ಭದಲ್ಲಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ರೊಡ್ರಿಗಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ,ಎಂ ಎಸ್ ಮೊಹಮ್ಮದ್, ಅಬ್ಬಾಸ್ ಅಲಿ,ನಾರಾಯಣ ನಾಯ್ಕ್,ಪ್ರಶಾಂತ್ ಕುಲಾಲ್,ಸುರೇಶ್ ನಾವೂರ ವಕೀಲರು,ಉಮಾಕರ್ ಬಂಗೇರ, ಪ್ರವೀಣ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here