Home ಕರಾವಳಿ ಮಡಿಪು: ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ – ಆಯೋಜಕರಿಗೆ ನೋಟಿಸ್ ಜಾರಿ ಮಾಡಿದ ಚುನಾವಣಾ...

ಮಡಿಪು: ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ – ಆಯೋಜಕರಿಗೆ ನೋಟಿಸ್ ಜಾರಿ ಮಾಡಿದ ಚುನಾವಣಾ ಆಯೋಗ

0

ಮಂಗಳೂರು: ಮಂಗಳೂರಿನ ಮಡಿಪು ಜಂಕ್ಷನ್ ನಲ್ಲಿ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಯೋಜಕರ ವಿರುದ್ದ ಕಾರಣ ಕೇಳಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಮಾರ್ಚ್ 29 ರಂದು ಮುಡಿಪು ಜಂಕ್ಷನ್ ನಲ್ಲಿ ಅಬೂಬಕ್ಕರ್ ಸಿದ್ಧೀಕ್ ಎಂಬುವರು ಸೌಹಾರ್ದ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಹಿಂದೂ ಪರ ಸಂಘಟನೆಗಳು ಕೂಡ ರಸ್ತೆ ಬಂದ್ ಮಾಡಿದ ವಿಚಾರಕ್ಕೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು,

ಈ ಹಿನ್ನಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಚುನಾವಣಾ ಆಯೋಗ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ ಮಾಡಿದ ಅಬೂಬಕ್ಕರ್ ಸಿದ್ಧೀಕ್ ಎಂಬವರಿಗೆ ನೋಟೀಸ್ ಜಾರಿ ಮಾಡಿದೆ. ನೋಟಿಸ್ ನಲ್ಲಿ ಕಾರ್ಯಕ್ರಮ ಆಯೋಜನೆಗೆ ಮೊದಲು ಅನುಮತಿ ಪತ್ರ ನೀಡಲಾಗಿತ್ತು, ಆದರೆ ಅನುಮತಿ ಪತ್ರದ ಷರತ್ತು ಉಲ್ಲಂಘಿಸಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದು, ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಈ ಹಿನ್ನಲೆ ವಿಡಿಯೋ ಆಧಾರದಲ್ಲಿ ಕಾರಣ ಕೇಳಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here